ಮಂಡೆಕೋಲು ಗ್ರಾಮ, ಗೌಡ ಸ್ವಜಾತಿ ಬಾಂಧವರ ಸಮಾವೇಶ ಮತ್ತು ಕ್ರೀಡಾಕೂಟ

0

 

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ಆಶ್ರಯದಲ್ಲಿ ಗ್ರಾಮ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕಗಳು ಏರ್ಪಡಿಸಿದ ಗೌಡ ಸ್ವಜಾತಿ ಬಾಂಧವರ ಸಮಾವೇಶ ಮತ್ತು ಕ್ರೀಡಾಕೂಟವನ್ನು ಅಕ್ಟೋಬರ್ 30ರಂದು ಶ್ರೀರಾಮ ಭಜನಾ ಮಂದಿರ ಪೇರಾಲು ಅಂಬ್ರೋಟಿ ಇದರ ವಠಾರದಲ್ಲಿ ಏರ್ಪಡಿಸಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯರಾದ ಅಡ್ಡಂತಡ್ಕ ದೇರಣ್ಣ ಗೌಡ (ನಿವೃತ್ತ ವಾಯುದಳ )ರವರು ನೆರವೇರಿಸಿದರು ಅತಿಥಿಗಳಾಗಿ ಹೇಮಂತ್ ಕುಮಾರ್ ಗೌಡರ ಮನೆ ಆಡಳಿತ ಮೊಕ್ತೇಸರ ಶ್ರೀ ಕ್ಷೇತ್ರ ಬಜಪಿಲ , ಚಂದಪ್ಪ ಗೌಡ ಪಾತಿಕಲ್ಲು ಪ್ರಗತಿಪರ ಕೃಷಿಕರು, ಜಲಜಾ ದೇವರಗುಂಡ ಉಪಾಧ್ಯಕ್ಷರು ಸಹಕಾರಿ ಸಂಘ ಮಂಡೆಕೋಲು, ಉದಯಕುಮಾರ ಜಿ ಮುಖ್ಯ ಕಾರ್ಯನಿರ್ವಹನಾಧಿಕಾರಿ ಸಹಕಾರಿ ಸಂಘ ಮಂಡೆಕೋಲು, ಅಶ್ವಿನಿ ಕುಮಾರ್ ಪೆರಾಲು ಮೂಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಪೇರಾಲು ಶಾಲೆ, ಭಾರತಿ ಯು.ಎಂ ಪ್ರಧಾನ ಕಾರ್ಯದರ್ಶಿ ಗ್ರಾಮ ಮಹಿಳಾ ಘಟಕ ಮೊದಾಲಾದವರು ಭಾಗವಹಿಸಿದ್ದರು. ನಂತರ ನಡೆದ ಕ್ರೀಡಾಕೂಟದಲ್ಲಿ ಗ್ರಾಮದ ಸ್ವಜಾತಿ ಬಾಂಧವರಿಗಾಗಿ ಏರ್ಪಡಿಸಿದ ಲಕ್ಕೀ ಗೇಮ್, ಡಾಡ್ಜ್ ಬಾಲ್, ತ್ರೋಬಾಲ್, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಮರೊಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ರವರು ತನ್ನ ಸಮರೋಪ ಭಾಷಣದಲ್ಲಿ ಜಾತಿ ಸಂಘಟನೆಯಲ್ಲಿ ಕ್ರೀಡೆ ಒಂದು ನೆಪ ಮಾತ್ರ ಇದು ಎಲ್ಲರನ್ನೂ ಒಗ್ಗೂಡಿಸಲು ಒಳ್ಳೆಯ ಅವಕಾಶ, ನಮ್ಮ ಸಂಘಟನೆ ನಮ್ಮ ಜಾತಿ ಬಾಂಧವರನ್ನು ಬಲಪಡಿಸುವುದರೊಂದಿಗೆ ಇನ್ನೊಂದು ಜಾತಿಯನ್ನು ಗೌರವಿಸುವುದೇ ಆಗಿದೆ ಹೊರತು ವಿರೋಧಿಸುವುದಕ್ಕಲ್ಲ ಎಂದು ನುಡಿದರು. ಗ್ರಾಮ ಗೌಡ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿ ಮನೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಗೌಡರ ಯುವ ಸೇವಾ ಸಂಘ (ರಿ)ದ ಅಧ್ಯಕ್ಷರಾದ ಚಂದ್ರ ಕೋಲ್ಚರ್ ಅವರು ಸಂಘದ ಉದ್ದೇಶ ಮತ್ತು ಮಹತ್ವವನ್ನು ತಿಳಿಯಪಡಿಸಿದರು ಹಾಗೂ ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆಯುವ ಕೆದಂಬಾಡಿ ರಾಮಯ್ಯಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು ಗ್ರಾಮ ಗೌಡ ಸಮಿತಿಯ ಹಿರಿಯ ಸದಸ್ಯರಾದ ವಿಮಲಾವತಿ ಚಿನ್ನಪ್ಪ ದೇವರಗುಂಡ, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ತಾಲೂಕು ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷರು ಈ ಭಾಗದ ಉಸ್ತುವಾರಿ ನಿರ್ದೇಶಕರಾದ ಸದಾನಂದ ಮಾವಜಿ ,ಕಾರ್ಯಕ್ರಮದ ಸಂಚಾಲಕರಾದ ದಾಮೋದರ ಮಿತ್ತ ಪೇರಲು ಮಹಿಳಾ ಘಟಕದ ಅಧ್ಯಕ್ಷರಾದ ದಿವ್ಯಲತಾ ಚೌಟಾಜೆ ,ತರುಣ ಘಟಕದ ಸಂಚಾಲಕರಾದ ಕುಸುಮಾದರ ಮಾವಜಿ ವೇದಿಕೆಯಲ್ಲಿ ಉಪಸಿತರಿದ್ದರು. ನಂತರ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಜಯರಾಜ್ ಕುಕ್ಕೆಟಿ ಮತ್ತು ದೇವಿದಾಸ್ ಕುಕ್ಕುಡೇಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here