ನೆಲ್ಲೂರು ಕೆಮ್ರಾಜೆ : ಸುದ್ದಿ ಕೃಷಿ ಕೇಂದ್ರ ಸುಳ್ಯದ ವತಿಯಿಂದ ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಸಮಾಲೋಚನೆ – ಸಂವಾದ ಕಾರ್ಯಾಗಾರ

0

 

ಸುದ್ದಿ ಕೃಷಿ ಕೇಂದ್ರ ಸುಳ್ಯ ಇದರ ವತಿಯಿಂದ ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಸಮಾಲೋಚನೆ – ಸಂವಾದ, ಸಮಗ್ರ ಕೃಷಿಯ ಬಗ್ಗೆ ತಜ್ಞರಿಂದ ನಿರ್ದಿಷ್ಟ ಕೃಷಿಯ ಬಗ್ಗೆ ಆಸಕ್ತರೊಂದಿಗೆ ಕಾರ್ಯಾಗಾರವು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಧನಂಜಯ ಎರ್ಮೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಮುಖ್ಯ ಅತಿಥಿಯಾಗಿದ್ದರು.


ಸುದ್ದಿ ಬಿಡುಗಡೆ ವಾರಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಸುದ್ದಿ ಕೃಷಿ ಸೇವಾ ಕೇಂದ್ರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ ಸೇವಾ ಕೇಂದ್ರ ಕಾರ್ಯನಿರ್ವಹಿಸುವ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಶುಭಕರ ನಾಯಕ್‌ಬೊಳ್ಳಾಜೆ, ದೇವಿಪ್ರಸಾದ್ ಸುಳ್ಳಿ, ಸತ್ಯೇಶ್ ಚಂದ್ರೋಡಿ, ಪ್ರಗತಿಪರ ಕೃಷಿಕರಾದ ಬೆಟ್ಟ ರಾಜಾರಾಂ ಭಟ್, ಸಚ್ಚಿದಾನಂದ ಡಿ., ಲಿಂಗಪ್ಪ ಮಾಸ್ತರ್, ರಾಘವೇಂದ್ರ ಭಟ್ ಕಂದೂರು ಹಾಗೂ ಗೀತಾ ಕಜೆ, ಜನಾರ್ಧನ ನಾಯಕ್ ಬೊಳ್ಳಾಜೆ, ರವಿಚಂದ್ರ ಕೊಡಪಾಲ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್, ಕೇಶವ ಕೊಡಪಾಲ, ಕೆ ಎಂ ಸುಬ್ರಹ್ಮಣ್ಯ ಜೀರ್ಮುಕ್ಕಿ, ಭವ್ಯ ವಲಿಕಜೆ, ರಾಮಚಂದ್ರ ಕೆ, ಪದ್ಮನಾಭ ಎಸ್.ಎನ್, ಹಿಮಕರ ಕಜೆ, ರಮಾನಂದ ಹೊಸ್ತೋಟ, ವಿಷ್ಣುಭಟ್ ಕೇಪಳಕಜೆ ಉಪಸ್ಥಿತರಿದ್ದರು.

ಸೊಸೈಟಿ ಸಿಬ್ಬಂದಿಗಳಾದ ಚನಿಯಪ್ಪ ಚೆನ್ನಡ್ಕ, ಶುಭಾಚಂದ್ರ ನಾಯಕ್, ಜೀವನ್ ಪುನ್ಕುಟ್ಟಿ ಸಹಕರಿಸಿದರು.
ಸುದ್ದಿ ಕೃಷಿ ವಿಭಾಗದ ರಮ್ಯಸತೀಶ್ ಕಳಂಜ, ಸುದ್ದಿ ಸೊಸೈಟಿಯ ಅನ್ವಿತಾ, ವರದಿಗಾರ ಶಿವರಾಮ ಕಜೆಮೂಲೆ ಉಪಸ್ಥಿತರಿದ್ದರು. ವರದಿಗಾರ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here