‘ನಮ್ಮೂರು ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಜತೀಂದ್ರ ಶೆಟ್ಟಿಯವರ ‘ನಮ್ಮೂರು-ನಮ್ಮೂರ ಶೆಟ್ಟ್ರು’ ಕೃತಿ ಬಿಡುಗಡೆ

0

  • ಖ್ಯಾತ ಜಾನಪದ ವಿದ್ವಾಂಸ ಪ್ರೊ. ವಿವೇಕ್ ರೈಯವರಿಗೆ ಸನ್ಮಾನ, ಕೃಷಿ ಚಟುವಟಿಕೆಗೆ ಸಹಕರಿಸಿದವರಿಗೆ ಗೌರವಾರ್ಪಣೆ
  • ತುಳು ಸಂಸ್ಕೃತಿಯಂತೆ ನಡೆದ ವಿಶಿಷ್ಟ ಕಾರ್ಯಕ್ರಮ

ಉಪ್ಪಿನಂಗಡಿ: ‘ನಮ್ಮೂರು ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿಯವರ ಸಾಮಾಜಿಕ ಬದುಕನ್ನು ಆಧರಿಸಿ ರಚಿಸಲಾಗಿರುವ ‘ನಮ್ಮೂರು-ನಮ್ಮೂರ ಶೆಟ್ಟ್ರು’ ಕೃತಿಯ ಬಿಡುಗಡೆ ಮತ್ತು ಪುತ್ತೂರಿನ ಹೆಸರನ್ನು ಹತ್ತೂರಿಗೆ ಪಸರಿಸಿರುವ ಖ್ಯಾತ ಜಾನಪದ ವಿದ್ವಾಂಸ ಪ್ರೊ. ಬಿ.ಎ. ವಿವೇಕ್ ರೈಯವರಿಗೆ ಸನ್ಮಾನ ಹಾಗೂ ಜತೀಂದ್ರ ಶೆಟ್ಟಿಯವರ ಕೃಷಿ ಕೆಲಸ ಕಾರ್ಯಗಳಿಗೆ ಸಹಕರಿಸಿದವರಿಗೆ ಗೌರವಾರ್ಪಣೆ ಸಲ್ಲಿಸುವ ಸಮಾರಂಭ ಮಾರ್ಚ್ ೨೭ರಂದು ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

 

ತುಳು ಸಂಸ್ಕೃತಿಯಂತೆ ನಡೆದ ಕಾರ್ಯಕ್ರಮ:
ತುಳುನಾಡಿನ ಸಂಸ್ಕೃತಿಯಂತೆ ವೈಶಿಷ್ಟ್ಯಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಡಾ. ಬಿ.ಎ. ವಿವೇಕ್ ರೈ ಕೃತಿ ಬಿಡುಗಡೆ ಮಾಡಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಯು.ಪಿ. ಶಿವಾನಂದರವರು ಕಾರ್ಯಕ್ರಮ ಉದ್ಘಾಟಿಸಿದರು. ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಸಂತ ಕುಮಾರ್ ತಾಳ್ತಜೆ, ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ಡಾ. ನಿರಂಜನ ರೈ, ಡಾ. ರಾಜಾರಾಮ್ ಕೆ.ಬಿ., ಡಾ. ಸುಪ್ರೀತ್ ಲೋಬೊ, ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಅಬ್ದುಲ್ ರಹಿಮಾನ್ ಯುನಿಕ್ ಮತ್ತು ಅಲಿಮಾರ ರಾಜೀವ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎ.ಜತೀಂದ್ರ ಶೆಟ್ಟಿ ಸ್ವಾಗತಿಸಿ, ಕೃತಿಯ ಸಂಪಾದಕರಾದ ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ದೀಪಕ್ ಉಬಾರ್ ವಂದಿಸಿದರು. ಉಪ್ಪಿನಂಗಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಅನುಶ್ರೀ ಸಾಮೆತ್ತಡ್ಕ ಮತ್ತು ನೀಮಾ ಎಚ್. ಕುಂಬ್ರ ಪ್ರಾರ್ಥಿಸಿದರು.‌

ಪುತ್ತೂರಿನವರೇ ಆಗಿದ್ದು ಹತ್ತೂರಿನಲ್ಲಿ ಹೆಸರು ಪಡೆದಿರುವ ಖ್ಯಾತ ಸಾಹಿತಿ ಪ್ರೊ. ವಿವೇಕ್ ರೈಯವರನ್ನು ಕಾರ್ಯಕ್ರಮದಲ್ಲಿ ನಮ್ಮೂರಿನ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು. ಜತೆಗೆ ಜತೀಂದ್ರ ಶೆಟ್ಟಿಯವರ ಕೃಷಿ ಇತ್ಯಾದಿ ಕೆಲಸ ಕಾರ್ಯಗಳಿಗೆ ಸಹಕರಿಸಿದವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಸುದ್ದಿಯಲ್ಲಿ ನೇರಪ್ರಸಾರ – ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕಾರ

ಕೃತಿ ಬಿಡುಗಡೆ ಮತ್ತು ಸನ್ಮಾನ ಸಮಾರಂಭ ಸುದ್ದಿ ಪುತ್ತೂರು ಯೂ ಟ್ಯೂಬ್ ಚಾನೆಲ್ ಮತ್ತು ಸುದ್ದಿ ಫೇಸ್ಬುಕ್ ಪೇಜಿನಲ್ಲಿ ನೇರಪ್ರಸಾರಗೊಂಡಿತು.‌ ಅಲ್ಲದೆ, ‘ಭ್ರಷ್ಟಾಚಾರ ಮುಕ್ತ ನಮ್ಮೂರು’ ಎಂಬ ಧ್ಯೇಯವಾಕ್ಯದಡಿ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ನಡೆಸುತ್ತಿರುವ ಸುದ್ದಿ ಬಳಗಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞೆ ಸ್ವೀಕರಿಸಲಾಯಿತು.

LEAVE A REPLY

Please enter your comment!
Please enter your name here