ನ್ಯಾಕ್  ಮೌಲ್ಯ ಮಾಪನ ಪ್ರಕ್ರಿಯೆಯಿಂದ ಕಾಲೇಜುಗಳ ಗುಣ ಮಟ್ಟ ವೃದ್ಧಿ : ಪ್ರೊ. ಶ್ರೀಧರ ಬಾಬು.

0

ಪುತ್ತೂರು: ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯಿಂದ ಕಾಲೇಜುಗಳ ಗುಣಮಟ್ಟ ಗಣನೀಯವಾಗಿ ವೃದ್ಧಿಸಿದೆ ಎಂಬುದಾಗಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಪ್ರೊ. ಪ್ರೊ. ಶ್ರೀಧರ ಬಾಬುರವರು ಹೇಳಿದರು. ಅವರು ದಿನಾಂಕ 30.03.2022ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ ನಡೆದ ಐ. ಕ್ಯೂ. ಎ. ಸಿ. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿ ಈ ಕಾರ್ಯಗಾರದ ಮಹತ್ವ ಹಾಗೂ ಕಾಲೇಜಿನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ನ್ಯಾಕ್ ವಿಶೇಷಾಧಿಕಾರಿಗಳಾದ ಪ್ರೊ. ದೇವಿ ಪ್ರಸಾದ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಪ್ರೊ. ಬಸವರಾಜೇಶ್ವರಿ ದಿಡ್ಡಿಮನಿ ಆಗಮಿಸಿ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಉಪನ್ಯಾಸಕ ಪ್ರೊ. ದೀಕ್ಷಿತ್ ಕುಮಾರ್ ಪ್ರಾರ್ಥಿಸಿದರು. ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾದ  ಪ್ರೊ. ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಪ್ರೊ. ಉದಯರಾಜ್ ಎಸ್ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.  ಬಳಿಕ ಜಂಟಿ ನಿರ್ದೇಶಕರು ಕಾಲೇಜಿನಲ್ಲಿ ಲಭ್ಯವಿರುವ ಲ್ಯಾಬೋರೇಟರಿ ಹಾಗೂ ಗ್ರಂಥಾಲಯ ಸೌಲಭ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here