ಪುತ್ತೂರು ಜಾತ್ರೋತ್ಸವ – ಅರುಣಾ ಚಿತ್ರಮಂದಿರದಲ್ಲಿ ಕೆ.ಜಿ.ಎಫ್ 2  ಭರ್ಜರಿ ಹೌಸುಫುಲ್ ಪ್ರದರ್ಶನ

0

ಪುತ್ತೂರು: ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ 2 ಸಿನಿಮಾ ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಕಿಭಾಯ್ ಅಬ್ಬರಕ್ಕೆ ಚಿತ್ರರಂಗವೇ ಫಿದಾ ಆಗಿದೆ. ಚಿತ್ರರಂಗದ ಈ ವರೇಗಿನ ಎಲ್ಲಾ ದಾಖಲೆಗಳು ಉಡೀಸ್ ಆಗಿವೆ.

 

ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ 2 ಸೃಷ್ಟಿಸಿದ್ದ ಕ್ರೇಜ್ ಅಷ್ಟಿಷ್ಟಲ್ಲ 2018ರಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತ್ತು ಅಲ್ಲಿಂದ ಕೆಜಿಎಫ್ ಕೇವಲ ಸಿನಿಮಾ ಆಗಿ ಮಾತ್ರವಲ್ಲ ಒಂದು ಬ್ರ್ಯಾಂಡ್ ಆಗಿ ಹವಾ ಹುಟ್ಟು ಹಾಕಿತ್ತು. ಕೆ.ಜಿ.ಎಫ್‌ನಲ್ಲಿ ಗರುಡನ ಕೊಲೆ ಬಳಿಕ ಮುಂದೇನಾಯ್ತು ಎಂಬ ಪ್ರಶ್ನೆಗೆ 4 ವರ್ಷಗಳ ಬಳಿಕ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ನೀಲ್. ಈಗಾಗಲೇ ಕೋಟಿ ಕೋಟಿ ದೋಚುತ್ತಿರುವ ಕೆ.ಜಿ.ಎಫ್ ೨ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರ ತೆಲುಗು, ಹಿಂದಿ, ಮಲೆಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿದೆ. ಕೆಜಿಎಫ್ ಚಾಪ್ಟರ್ 2 ನಲ್ಲಿ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್, ಈಶ್ವರಿ ರಾವ್, ಮಾಳವಿಕ ಅವಿನಾಶ್ ಮತ್ತಿತರರು ನಟಿಸಿದ್ದಾರೆ.

ಅರುಣಾ ದಿನಾ 4 ದೇಖಾವೆಗಳು
ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಕೆಜಿಎಫ್ 2 ದಿನಾ 4 ದೇಖಾವೆಗಳಲ್ಲಿ ಅಂದರೆ ಬೆಳಿಗ್ಗೆ 10.45, ಮಧ್ಯಾಹ್ನ 2, ಸಂಜೆ 5.45ಮತ್ತು ರಾತ್ರಿ 9 ಗಂಟೆಗೆ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಚಿತ್ರವು ಭರ್ಜರಿ ಹೌಸುಫುಲ್ ಪ್ರದರ್ಶನ ಕಾಣುತ್ತಿದ್ದು ಚಿತ್ರಪ್ರೇಮಿಗಳು ಸಹಕಾರ ನೀಡುವಂತೆ ಚಿತ್ರಮಂದಿರದ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here