ಕಳೆದ ವರ್ಷದ ಕ್ರಮಕ್ಕಿಂತಲೂ ಈ ವರ್ಷ ಇನ್ನಷ್ಟು ವಿಚಾರ ಸೇರ್ಪಡೆ-ಪುತ್ತೂರು ಜಾತ್ರೆಯಲ್ಲಿ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ

0

ಪುತ್ತೂರು: ಬಹಳ ದೊಡ್ಡ ಮಟ್ಟದಲ್ಲಿ ನಡೆಯುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಈ ಭಾರಿ ಕಳೆದ ವರ್ಷದ ಕ್ರಮಕ್ಕಿಂತಲೂ ಹೆಚ್ಚಿನ ವಿಚಾರ ಸೇರ್ಪಡೆ ಮಾಡಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಅವರು ಹೇಳಿದ್ದಾರೆ.

 

ಅವರು ಎ.15ರ ಸಂಜೆ ಪುತ್ತೂರು ಜಾತ್ರೆಗೆ ಆಗಮಿಸಿ ದೇವರ ದರುಶನ ಪಡೆದು ಬಳಿಕ ಬಂದೋ ಬಸ್ತ್ ಕುರಿತು ಜಾತ್ರಾ ಗದ್ದೆಯಲ್ಲಿ ವಿನೂತನವಾಗಿ ಅಳವಡಿಸಿದ ಮೊಬೈಲ್ ಸಿಸಿ ಕ್ಯಾಮರ ಕಂಟ್ರೋಲ್ ರೂಮ್ ಅನ್ನು ಪರಿಶೀಲನೆ ಮಾಡಿದರು. ಪುತ್ತೂರು ಜಾತ್ರೆಯಲ್ಲಿ ಕಳೆದ ವರ್ಷ ವರ್ಷದಲ್ಲಿ ಏನೆನು ಕ್ರಮ ಕೈಗೊಂಡಿದ್ದೇವೆಯೋ ಅದಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳುವ ಆಧಾರದ ಮೇಲೆ ಹಲವು ವಿಚಾರ ಸೇರ್ಪಡೆ ಮಾಡಿಸಿದ್ದೇವೆ. ಜಾತ್ರೆಯಲಿ ಸಿಸಿ ಟಿವಿ ಕಣ್ಗವಾಲಿದೆ. ಅದರ ಜೊತೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲಿ ಎಲ್ಲಾ ಕಡೆ ಟ್ರಾಫಿಕ್ ವ್ಯವಸ್ಥೆ ಮಾಡಿಸಿದ್ದೇವೆ. ಎ.16 ಮತ್ತು 17ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಆಯಾ ಕಡೆ ಬದಲಾವಣೆಗೆ ಗುರುತಿಸಲಾಗಿದೆ. ಕೆಲವು ಕಡೆ ಏಕಮುಖ ಸಂಚಾರ, ನೋ ಎಂಟ್ರಿ ಸರಿಯಾಗಿ ಪಾಲಿಸುವ ನಿಟ್ಟಿನಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಮೊಬೈಲ್ ಸಿಸಿ ಕ್ಯಾಮರ ಕಂಟ್ರೋಲ್ ರೂಮ್ ಪರಿಶೀಲನೆ:
ಎಸ್ಪಿ ಋಷಿಕೇಶ್ ಸೋನಾವಣೆ ಅವರು ದೇವಳದ ಜಾತ್ರೆಯಲ್ಲಿ ಪಾಲ್ಗೊಂಡು ಬಳಿಕ ಬ್ರಹ್ಮರಥ ಮಂದಿರದಲ್ಲಿ ಇರಿಸಲಾಗಿರುವ ಮೊಬೈಲ್ ಸಿಸಿ ಕ್ಯಾಮರ ಕಂಟ್ರೋಲ್ ರೂಮ್ ಅನ್ನು ಪರಿಶೀಲನೆ ನಡೆಸಿದರು. ಜಾತ್ರ ಗದ್ದೆಯಲ್ಲಿ ಒಟ್ಟು 30 ಸಿಸಿ ಕ್ಯಾಮರ ಅಳವಡಿಸಲಾಗಿದ್ದು, ಶೇಟ್ ಇಲೆಕ್ಟ್ರಾನಿಕ್ಸ್ ಅವರು ಮೊಬೈಲ್ ಕಂಟ್ರೋಲ್ ರೂಮ್‌ನಲ್ಲಿ ಇದರ ನಿಯಂತ್ರಣ ಮಾಡಿಕೊಂಡಿದ್ದು, ಈ ಕುರಿತು ಶೇಟ್ ಇಲೆಕ್ಟ್ರೋನಿಕ್ಸ್‌ನ ಮಾಲಕ ರೂಪೇಶ್ ಶೆಟ್ ಅವರಲ್ಲಿ ಮಾಹಿತಿ ಪಡೆದು ಕೊಂಡರು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್, ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಮ್.ಎನ್.ರಾವ್, ಎಸ್.ಐ ರಾಜೇಶ್ ಕೆ.ವಿ, ನಶ್ರೀತಾ ಬಾನು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here