ಪುತ್ತೂರು ಜಾತ್ರೆಯ ಬ್ರಹ್ಮರಥಕ್ಕೆ ರಥ ಕಲಶ

0

 

 


ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಎ.17ರಂದು ರಾತ್ರಿ ಜರುಗುವ ಬ್ರಹ್ಮರಥೋತ್ಸವದ ಮೊದಲು ಬೆಳಿಗ್ಗೆ ರಥ ಕಲಶ ನಡೆಯಿತು. ಭವ್ಯವಾಗಿ ಕಂಗೊಳಿಸುವ ರಥದ ಕಣ್ ದೃಷ್ಟಿ ತೆಗೆಯಲು ರಥ ಕಲಶ ಮಾಡಲಾಗುತ್ತದೆ.

 


ದೇವಳದ ಪರಿಚಾರಕರಾದ ಚಿಕ್ಕಪುತ್ತೂರು ಕುಟುಂಬದ ಪೂರ್ವಜರು ಮಾಡಿದ ಸಂಪ್ರದಾಯದಂತೆ ರಥ ಕಲಶಕ್ಕೆ ತಯಾರಿ ಕಾರ್ಯ ಚಿಕ್ಕಪುತ್ತೂರಿನ ಲಿಂಗಪ್ಪ ಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಎ.17ರಂದು ನಸುಕಿನ ಜಾವ ತಂತ್ರಿಗಳು ದೇವಳದ ಒಳಗಿನಿಂದ ತರುವ ಕಲಶ ನೀರನ್ನು ಬ್ರಹ್ಮರಥದ ದೇವರ ಪೀಠಕ್ಕೆ ತಂತ್ರಿಗಳು ಅಭಿಷೇಕ ಮಾಡುತ್ತಾರೆ. ರಥದ ಸುತ್ತು ವಿವಿಧ ಹೊರಗಿನ ಗಣಗಳಿಗೆ ಬಲಿ ಹಾಕಿ ರಥಕ್ಕೆ ರಕ್ಷಣೆ ಮಾಡುತ್ತಾರೆ. ಮತ್ತೊಂದು ಕಡೆ ರಥ ಕಲಶ ಸಿದ್ಧತೆ ಮಾಡುವ ಚಿಕ್ಕಪುತ್ತೂರು ಕುಟುಂಬದವರು ರಥ ಸಾಗುವ ರಥ ಬೀದಿಯ ಇಕ್ಕೆಲಗಳಲ್ಲಿ ಕುರ್ದಿ ನೀರು ಹಾಕಿ ಕೋಳ್ತಿರಿ ಇಡುತ್ತಾರೆ. ರಥದ ಬೀದಿಯ ಉದ್ದಕ್ಕೂ ಇಡಲು 150 ಕೋಳ್ತಿರಿ, 170ಹಾಳೆಚಿಲ್ಲಿ ಬೇಕಾಗುತ್ತದೆ. ಈ ಬಾರಿಯೂ ಎ.17ರಂದೂ ನಸುಕಿನ ಜಾವ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಮತ್ತು ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಥ ಕಲಶ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಪ್ರಧಾನ ಅರ್ಚಕ ಎ.ವಸಂತ ಕುಮಾರ್ ಕೆದಿಲಾಯ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪರಿಚಾರಕ ಚಂದ್ರಶೇಖರ್ ಪಿ.ಜಿ ಸೇರಿದಂತೆ ದೇವಳದ ಅರ್ಚಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here