ಪುತ್ತೂರು ಜಾತ್ರೆ ಮಹಾಲಿಂಗೇಶ್ವರ ದೇವರಿಗೆ ಅಷ್ಟವಧಾನ ಸೇವೆ

0

 


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.16ರ ರಾತ್ರಿ ಶ್ರೀ ದೇವರು ಕಂಡನಾಯಕ ಕಟ್ಟೆಯಲ್ಲಿ ಕುಳಿತ ಬಳಿಕ ಅಷ್ಟವಧಾನ ಸೇವೆ ನಡೆಯಿತು.


ದೇವಳದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಬಳಿಕ ಶಿವರಾತ್ರಿಗೆ ಶ್ರೀ ದೇವರಿಗೆ ಅಷ್ಟವಧಾನ ಸೇವೆ ನೆರವೇರಿಸಲಾಗಿತ್ತು. ಇದೀಗ 2ನೇ ಬಾರಿಗೆ ಜಾತ್ರೆಯ ಸಂದರ್ಭ ಅಷ್ಟವಧಾನ ಸೇವೆ ನಡೆಯಿತು.

ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವ ಮೊದಲು ಶ್ರೀ ಮಹಾಲಿಂಗೇಶ್ವರ ದೇವರು ಕಂಡನಾಯಕ ಕಟ್ಟೆಯಲ್ಲಿ ಅಷ್ಟವಧಾನ ಸೇವೆ ಸ್ವೀಕರಿಸಿದರು. ನಾಲ್ಕು ವೇದಗಳು, ಶಾಸ್ತ್ರಗಳು ಸೇರಿದಂತೆ ಶಾಸ್ತ್ರಿಯ ಸಂಗೀತ, ಕಲೆಗಳಿಂದ ಅಷ್ಟವಧಾನ ಸೇವೆ ನಡೆಯಿತು. ಋಗ್ವೇದದಲ್ಲಿ ವೇ ಮೂತಿ ವಸಂತ ಕೆದಿಲಾಯ, ಯಜುರ್ವೇದಲ್ಲಿ ಹರಿಪ್ರಸಾದ್, ಸಾಮವೇದದಲ್ಲಿ ಮುಕುಂದ ಭಟ್, ಅಥರ್ವವೇದದಲ್ಲಿ ಸೂರ್ಯನಾರಾಯಣ ಭಟ್, ಶಾಸ್ತ್ರ ಸೇವೆಯಲ್ಲ ವಸಂತ ಕೆದಿಲಾಯ, ಪುರಾಣ ಸೇವೆಯಲ್ಲಿ ಗಣೇಶ್ ಭಟ್ ಕೇಕನಾಜೆ, ಶಂಖನಾದಲ್ಲಿ ಸೂರ್ಯ ನಾರಾಯಣ ಭಟ್, ಶಾಸ್ತ್ರೀ ಸಂಗೀತದಲ್ಲಿ ವಿದುಷಿ ಸುಚಿತ್ರ ಹೊಳ್ಳ, ನಾದಸ್ವರದಲ್ಲಿ ಪಿ.ಕೆ.ಗಣೇಶ್ ಮತ್ತು ಬಳಗ, ನೃತ್ಯದಲ್ಲಿ ಯೋಗೀಶ್ವರಿ ಮತ್ತು ಬಳಗ, ರುದ್ರವಾದ್ಯದಲ್ಲಿ ಗಂಗಾಧರ್ ಮಾರಾರ್ ಮತ್ತು ಬಳಗ, ಯಕ್ಷಗಾನದಲ್ಲಿ ಪರೀಕ್ಷಿತ್ ಪಾಂಚಜನ್ಯ ಯಕ್ಷಗಾನ ಕಲಾವೃಂದ ಪುತ್ತೂರು ಇವರಿಂದ ಸೇವೆ ನಡೆಯಿತು.

LEAVE A REPLY

Please enter your comment!
Please enter your name here