ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ – ಬಟ್ಟಲು ಕಾಣಿಕೆ

0

 

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ಉತ್ಸವ ಏ.17ರಂದು ಮಧ್ಯಾಹ್ನ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.

 


ಬೆಳಿಗ್ಗೆ ಶ್ರೀ ದೇವರ ನಿತ್ಯ ಬಲಿ ಉತ್ಸವ, ಬಳಿಕ ವಾದ್ಯ, ಚೆಂಡೆ, ಶಂಖ ಸುತ್ತಿನ ಬಳಿಕ ಶ್ರೀ ದೇವರು ವಸಂತಕಟ್ಟೆಯ ತೊಟ್ಟಿಲಲ್ಲಿ ಕೂತು ಪೂಜೆ ಸ್ವೀಕರಿಸಿದರು. ಬಳಿಕ ಸರ್ವವಾದ್ಯದಿಂದ ಬಲಿ ಉತ್ಸವ ನಡೆದು ದರ್ಶನ ಬಲಿ ಆರಂಭಗೊಂಡಿತು. ದರ್ಶನ ಬಲಿಯಲ್ಲಿ ಒಂದು ಸುತ್ತು ಶ್ರೀ ದೇವರ ಉತ್ಸವ ಮೂರ್ತಿ ಹೊತ್ತಿರುವ ಬ್ರಹ್ಮವಾಹಕ ಗೋಪಾಲಕೃಷ್ಣ ಅಡಿಗರವರು ಪ್ರದಕ್ಷಿಣೆ ರೂಪದಲ್ಲಿ ಬಲಿ ಸುತ್ತು ನಡೆಸಿಕೊಟ್ಟರು. ಬಳಿಕ ಒಂದು ಸುತ್ತು ಬಲಿ ಉತ್ಸವದ ಬಳಿಕ ಶ್ರೀ ದಂಡನಾಯಕ ಉಳ್ಳಾಲ್ತಿ ಭಂಡಾರದೊಂದಿಗೆ ದರ್ಶನ ಬಲಿ ಉತ್ಸವ ನಡೆಯಿತು. ಶ್ರೀ ಉಳ್ಳಾಲ್ತಿಯು ‘ಬಟ್ಟಲು ಕಾಣಿಕೆಗ್ ಅನುವು ಮಲ್ತ್‌ಕೊರ್ಪೆ’ ಎಂದು ಅಪ್ಪಣೆ ನೀಡಿದ ಬಳಿಕ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here