ಹೊಸ್ಮಠ ಬಲ್ಯ ಶ್ರೀ ಕೃಷ್ಣಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವದ ಬೆಳ್ಳಿಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ-ಉದ್ಘಾಟನೆ

0

ಕಡಬ: ಕ್ರೀಡೆಯು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗದೆ, ಮನುಷ್ಯನ ಉತ್ತಮ ಆರೋಗ್ಯಕ್ಕೂ ಸಹಕಾರಿ ಎಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಕೆರೆಕೋಡಿ ಹೇಳಿದರು.

 

ಅವರು ಏ.೧೭ರಂದು ಹೊಸ್ಮಠ ಬಲ್ಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವದ ಬೆಳ್ಳಿಹಬ್ಬದ ಪ್ರಯುಕ್ತ ಅಯ್ಯಪ್ಪ ಭಜನಾ ಮಂದಿರ ಹೊಸ್ಮಠ ಬಲ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ಇಂದಿನ ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ, ಉದ್ಯೋಗದ ಚಿಂತನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತದೆ, ಇದರಿಂದ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದ ಅವರು ಕ್ರೀಡೆಯಿಂದ ಕೇವಲ ಮನೋರಂಜನೆ ಮಾತ್ರ ಸಿಗದೆ ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ, ಹೊಸ್ಮಠ ಬಲ್ಯ ಶ್ರೀ ಕೃಷ್ಣ ಜನ್ಮಾಷ್ಟಮಿ ವತಿಯಿಂದ ಪ್ರತಿ ವರ್ಷ ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದು ಶ್ಲಾಘನಿಯ ಎಂದು ಹೇಳಿದರು.

ಹೊಸ್ಮಠ ಬಲ್ಯ ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವದ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ನಾರಾಯಣ ಎನ್. ಬಲ್ಯ ಕೊಲ್ಲಿಮಾರು ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಛದ ಅಧ್ಯಕ್ಷ, ಬೆಳ್ಳಿಹಬ್ಬ ಸಮಿತಿಯ ಕೋಶಾಧಿಕಾರಿ ಶ್ರೀಕೃಷ್ಣ ಎಂ.ಆರ್., ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹೊಸ್ಮಠ ಬಲ್ಯ ಇದರ ಸ್ಥಾಪಕಾಧ್ಯಕ್ಷ ವೆಂಕಟ್ರಮಣ ದೇರಾಜೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ನಡೆದು ಬಂದ ಹಾದಿಗಳನ್ನು ವಿವರಿಸಿದರು. ಆದರ್ಶ ಸ್ಪೋರ್ಟ್ಸ್ ಕ್ಲಬ್ ಹೊಸ್ಮಠ ಬಲ್ಯ ಇದರ ಅಧ್ಯಕ್ಷ ಶೇಖರ ಗೌಡ ದೇರಾಜೆ, ಬಲ್ಯ ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್‌ನ ಸದಸ್ಯ ಚಂದ್ರಶೇಖರ ಗೌಡ ಪಾತ್ರಾಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷ ರೇಜಯ್ಯ ದೇವಾಡಿಗ ಗಾಣದಕೊಟ್ಟಿಗೆ, ವಿ.ಹಿಂ.ಪ. ಭಜರಂಗದಳ ನಮೋ ಲೈಟ್ ಘಟಕ ಬಲ್ಯ ಇದರ ಅಧ್ಯಕ್ಷ ಉಮೇಶ್ ಬಂಗೇರ ಮಾತನಾಡಿ ಶುಭ ಹಾರೈಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಸಮಿತಿಯ ಪೂರ್ವಾಧ್ಯಕ್ಷ ಡಿ.ಬಿ. ಮೋಹನ್ ದೇರಾಜೆ ಸ್ವಾಗತಿಸಿ, ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಬಿ.ಎಂ. ಪೂರ್ಣೇಶ್ ಬಾಬ್ಲುಬೆಟ್ಟು ವಂದಿಸಿದರು, ಶಿಕ್ಷಕ ಶೇಖರ್ ಪನ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here