ಪುತ್ತೂರು: ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಎ.22 ಮತ್ತು 23ರಂದು ನಡೆಯಲಿದೆ. ಎ.22ರಂದು ರಾತ್ರಿ ಕಾಸರಗೋಡು ಮುಳ್ಳೇರಿಯಾ ನೆಟ್ಟಣಿಗೆಯ ಕುಳದ ದೈವಸ್ಥಾನದಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಕುಳದಪಾರೆಗೆ ಆಗಮಿಸಲಿದೆ. ನಂತರ ಮೇಲೇರಿಗೆ ಅಗ್ನಿಸ್ಪರ್ಶ, ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಯಕ್ಷರತ್ನ, ಕಲಾರತ್ನ ಪ್ರಶಸ್ತಿ ಪುರಸ್ಕೃತ ರಾಘವ ಬಳ್ಳಾಲ್ ಕಾರಡ್ಕರವರ ಶಿಷ್ಯಂದಿರ ಪೂರ್ವರಂಗದ ಹಾಡುಗಳು ನಡೆಯಲಿದೆ. ಬಳಿಕ ಸುಳ್ಯಪದವು ಶ್ರೀ ಮಹಾವಿಷ್ಣು ಯಕ್ಷಗಾನ ಕಲಾಸಂಘದ ಖ್ಯಾತ ಕಲಾವಿದರಿಂದ ‘ದಕ್ಷಯಜ್ಞ-ಗದಾಯುದ್ಧ’ ಯಕ್ಷಗಾನ ನಡೆಯಲಿದೆ. ಎ.23ರ ಪ್ರಾತಃಕಾಲ 5 ಗಂಟೆಗೆ ಒತ್ತೆಕೋಲ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿಯಲ್ಲಿ ನೇರಪ್ರಸಾರ
ಒತ್ತೆಕೋಲದ ಸಂಪೂರ್ಣ ಕಾರ್ಯಕ್ರಮ ಸುದ್ದಿ ಪುತ್ತೂರು ಯೂ ಟ್ಯೂಬ್ ಚಾನೆಲ್ ಮೂಲಕ ನಡೆಯಲಿದೆ.
🙏