ಬೀಡಿ ಕಾರ್ಮಿಕರ ಶೋಷಣೆ ನಿಲ್ಲಿಸಲು ಆಗ್ರಹಿಸಿ ಬೀಡಿ ಕೆಲಸಗಾರರ ಸಂಘದಿಂದ ಪ್ರತಿಭಟನೆ

0

  • ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ಕಾರ್ಮಿಕರು

 

ಪುತ್ತೂರು: ಬೀಡಿ ಕಾರ್ಮಿಕರ ಶೋಷಣೆ ನಿಲ್ಲಿಸಬೇಕು, ಸರಕಾರ ನಿಗದಿಗೊಳಿಸಿದ ಕನಿಷ್ಠ ವೇತನ ಜಾರಿಯಾಗಬೇಕು, ಬಾಕಿ ವೇತನ ಪಾವತಿ ಮಾಡಬೇಕು ಸೇರಿಸಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕು ಬೀಡಿ ಕಾರ್ಮಿಕರ ಸಂಘದಿಂದ ನೆಹರುನಗರ ನಗರ ಸೌತ್ ಕೆನರಾ ಬೀಡಿ ಇಂಡಸ್ಟ್ರೀಸ್ ಎದುರು ಪ್ರತಿಭಟನೆ ಮಾಡಿದ ಮತ್ತು ನಮ್ಮ ಬೇಡಿಕೆ ಈಡೇರಿಕೆ ಕುರಿತು ಭರವಸೆ ನೀಡುವಂತೆ ಬೀಡಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಬೀಡಿ ಕಂಪೆನಿಯವರು ಬರುವಂತೆ ಪಟ್ಟು ಹಿಡಿದ ಘಟನೆ ಎ.21ರಂದು ನಡೆಯಿತು.

ಕಾರ್ಮಿಕ ಅಧಿಕಾರಿ, ಎಸ್.ಕೆ.ಹೋಮ್ ಪಾಲುದಾರರಿಂದ ಬೇಡಿಕೆ ಈಡೇರಿಕೆಗೆ ಭರವಸೆ
ಪ್ರತಿಭಟನಾ ನಿರತ ಬೀಡಿ ಕೆಲಸಗಾರರು ತಮ್ಮ ಬೇಡಿಕೆ ಈಡೇರಿಕೆಗೆ ಕಾರ್ಮಿಕ ಅಧಿಕಾರಿ ಮತ್ತು ಕಂಪೆನಿಯ ಪಾಲುದಾರರು ಬರಬೇಕೆಂದು ಪಟ್ಟು ಹಿಡಿದರು. ಮಧ್ಯಾಹ್ನದ ವೇಳೆ ಮಂಗಳೂರಿಂದ ಕಾರ್ಮಿಕ ಅಧಿಕಾರಿ ಅಮರೇಂದ್ರ ಹಾಗು ಎಸ್.ಕೆ. ಹೋಂ ಪಾಲುದಾರರಾದ ಕಾಳಿದಾಸ್ ಮತ್ತು ಕೇಶವ ಭಟ್ ಆಗಮಿಸಿ ಪ್ರತಿಭಟನಾ ನಿರತರರ ಸಮಸ್ಯೆಗಳನ್ನು ಚರ್ಚಿಸಿ ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ. ಕಡಿತ ಮಾಡಿದ ಕೆಲಸವನ್ನು ನೀಡುವ ಹಾಗೂ ಒಳ್ಳೆಯ ಎಲೆ ನೀಡಲು ಒಪ್ಪಿದ ಮಾಲಕರು ಕನಿಷ್ಟ ವೇತನ, ಗ್ರಾಚ್ಯುವಿಟಿ, ಮೊದಲಾದ ಸಮಸ್ಯೆಗಳಿಗೆ ೧೫ ದಿವಸಗಳ ಒಳಗೆ ಲಿಖಿತ ಉತ್ತರವನ್ನು ಕಾರ್ಮಿಕ ಇಲಾಖೆ ನೀಡಲು ಕಾರ್ಮಿಕ ಅದಿಕಾರಿಯವರ ಸೂಚನೆಗೆ ಆಡಳಿವರ್ಗ ಒಪ್ಪಿಕೊಂಡಿತು. ಈ ನಿಟ್ಟಿನಲ್ಲಿ ಬೀಡಿ ಕೆಲಸಗಾರರು ಹೋರಾಟ ಹಿಂಪಡೆದರು. ಕಾಮಿಕರು ಮದ್ಯಾಹ್ನದ ಪ್ರತಿಭಟನಾ ಸ್ಥಳದಲ್ಲೇ ಅನ್ನ ಬೇಯಿಸಿ ಊಟ ಮಾಡಿದರು ಎಂದು ಬೀಡಿ ಕೆಲಸಗಾರರ ಪ್ರಧಾನ ಕಾರ್ಯದರ್ಶಿ ಬಿ.ಎಮ್.ಭಟ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here