ಮುಂಡೂರು ಶಾಲೆಯಲ್ಲಿ ವಾಲಿಬಾಲ್ ತರಬೇತಿ ಶಿಬಿರ ಸಮಾರೋಪ

0

  • ಮಕ್ಕಳು ರಚಿಸಿದ ಕಲಾ ಕೃತಿಗಳ ಪ್ರದರ್ಶನ-ಗಣ್ಯರಿಂದ ವೀಕ್ಷಣೆ

ಪುತ್ತೂರು: ತರಬೇತಿ ಶಿಬಿರದಲ್ಲಿ ಪಡೆದುಕೊಂಡ ಅನುಭವ ಹಾಗೂ ಕೌಶಲಗಳನ್ನು ವಿದ್ಯಾರ್ಥಿಗಳು ಮುಂದಿನ ಹಂತದಲ್ಲೂ ಮುಂದುವರಿಸುತ್ತಾ ಹೋದಲ್ಲಿ ಒಬ್ಬ ಅದ್ಭುತ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈ.ಶಿ.ನಿರ್ದೇಶಕ ಶೇಷಪ್ಪ ಗೌಡ ಹೇಳಿದರು.


ಮುಂಡೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾದ ೧೫ ದಿನಗಳ ವಾಲಿಬಾಲ್ ತರಬೇತಿ ಶಿಬಿರ ಹಾಗೂ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನರಿಮೊಗರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಚರಣ್ ಕುಮಾರ್ ಮಾತನಾಡಿ ಮಕ್ಕಳ ಸೃಜನಾತ್ಮಕ ಕಲಿಕೆಗೆ ಪೂರಕವಾದ ಕಾರ್ಯಕ್ರಮಗಳನ್ನು ಮುಂಡೂರು ಶಾಲೆಯಲ್ಲಿ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಮಾತನಾಡಿ ನಮ್ಮ ಶಾಲೆಯಲ್ಲಿ ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗಿರುವುದು ತುಂಬಾ ಖುಷಿ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಮ್ಮ ಶಾಲೆಯಲ್ಲಿ ಮೂಡಿಬರಲು ತಾವೆಲ್ಲರೂ ಅಹಕಾರ ನೀಡಬೇಕೆಂದು ಹೇಳಿದರು.

ವಾಲಿಬಾಲ್ ತರಬೇತುದಾರರು, ಅಂಬಿಕಾ ವಿದ್ಯಾಲಯದ ದೈ.ಶಿ.ನಿರ್ದೇಶಕರಾದ ನವೀನ್, ಕಲಾ ಶಿಕ್ಷಕರು, ಕಲಾ ಸ್ಪರ್ಶದ ತರಬೇತುದಾರರೂ ಆದ ಶಿವಸುಬ್ರಹ್ಮಣ್ಯ ಹಾಗೂ ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ ಸಂದರ್ಭೋಚಿತವಾಗಿ ಮಾತನಾಡಿದರು. ಶಿಬಿರಾರ್ಥಿಗಳ ಪರವಾಗಿ ಕೆ ನಿಹಾಲ್ ರೈ ಹಾಗೂ ಅಭಿಷೇಕ್ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮುಂಡೂರು ಗ್ರಾ.ಪಂ ಸದಸ್ಯರಾದ ದುಗ್ಗಪ್ಪ ಕಡ್ಯ, ಕಾವ್ಯ ತೌಡಿಂಜ, ಯಶೋಧ, ಪಿಡಿಓ ಗೀತಾ ಬಿ.ಎಸ್, ಗ್ರಾಮಕರಣಿಕರಾದ ತುಳಸಿ ಉಪಸ್ಥಿತರಿದ್ದರು. ಮುಂಡೂರು ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಬಿ ಪ್ರಸ್ತಾವನೆಗೈದು ಸ್ವಾಗತಿಸಿದರು. ದೈ.ಶಿ.ಶಿಕ್ಷಕಿ ವನಿತಾ ಬಿ ವಂದಿಸಿದರು. ಸಹ ಶಿಕ್ಷಕ ಅಬ್ದುಲ್ ಬಶೀರ್ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು. ಪೋಷಕರು, ಊರವರು ಉಪಸ್ಥಿತರಿದ್ದರು.

ಗೌರವಾರ್ಪಣೆ:
ವಾಲಿಬಾಲ್ ತರಬೇತುದಾರರು, ಅಂಬಿಕಾ ವಿದ್ಯಾಲಯದ ದೈ.ಶಿ.ನಿರ್ದೇಶಕರಾದ ನವೀನ್, ಕಲಾ ಶಿಕ್ಷಕರು, ಕಲಾ ಸ್ಪರ್ಶದ ತರಬೇತುದಾರರೂ ಆದ ಶಿವಸುಬ್ರಹ್ಮಣ್ಯ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಯತೀಶ್, ಚಿರಂಜೀವಿ, ಹರ್ಷಿತ್, ಅಕ್ಷಯ್ ಮತ್ತು ಶರಣ್ ಮೊದಲಾದವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಗಮನ ಸೆಳೆದ ಕಲಾ ಸ್ಪರ್ಶ:
ಕಲಾ ಸ್ಪರ್ಶ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ರಚಿಸಿರುವ ಕಲಾಕೃತಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಕಲಾ ಸ್ಪರ್ಶ ಪ್ರವೇಶದ್ವಾರ ಹಾಗೂ ಸುಂದರವಾಗಿ ಅಲಂಕೃತಗೊಂಡ ವೇದಿಕೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ಮಕ್ಕಳು ರಚಿಸಿದ ಕಲಾಕೃತಿಗಳನ್ನು ವೀಕ್ಷಿಸಿದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ವಾಲಿಬಾಲ್ ತರಬೇತಿ ಹಾಗೂ ಮಕ್ಕಳ ಬೇಸಿಗೆ ಶಿಬಿರದ ಸಮಗ್ರ ಚಿತ್ರಣವನ್ನು ಎಲ್‌ಇಡಿ ಪರದೆಯ ಮುಖಾಂತರ ಪೋಷಕರಿಗೆ ಪ್ರಸ್ತುತ ಪಡಿಸಲಾಯಿತು. ಶಿಕ್ಷಕ ರವೀಂದ್ರ ಶಾಸ್ತ್ರಿಯವರು ಸಮಗ್ರ ಚಿತ್ರಣ ಪ್ರಸ್ತುತ ಪಡಿಸುವ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here