ಬಿ.ಇಡಿ. ದ್ವಿತೀಯ, ಚತುರ್ಥ ಸೆಮಿಸ್ಟರ್ ಪರೀಕ್ಷೆ – ಕುಂತೂರು ಮಾರ್ ಇವಾನಿಯೋಸ್‌ಗೆ ಶೇ.100 ಫಲಿತಾಂಶ: 81 ಡಿಸ್ಟಿಂಕ್ಷನ್

0

ಕಡಬ: ಮಂಗಳೂರು ವಿಶ್ವವಿದ್ಯಾಲಯ 2022 ರಮಾರ್ಚ್‌ನಲ್ಲಿ ನಡೆಸಿದ ಬಿಇಡಿ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕುಂತೂರಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯಕ್ಕೆ ಎರಡು ಸೆಮಿಸ್ಟರ್‌ನಲ್ಲೂ ಶೇ. 100 ಫಲಿತಾಂಶ ಲಭಿಸಿದೆ.

ವಿದ್ಯಾಲಯದಿಂದ ದ್ವಿತೀಯ ಸೆಮಿಸ್ಟರ್‌ಗೆ ಹಾಜರಾದ 47 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಮತ್ತು 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚತುರ್ಥ ಸೆಮಿಸ್ಟರ್ ಗೆ ಹಾಜರಾದ 40 ವಿದ್ಯಾರ್ಥಿಗಳೂ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here