ಕೋಡಿಂಬಾಡಿ ಗ್ರಾಮ ಪಂಚಾಯತ್‌ನಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್ ಆಂದೋಲನ

0

 

 


ಪುತ್ತೂರು : ದೇಶದ ಪ್ರಗತಿಯಲ್ಲಿರೈತರ ಪಾಲುದಾರಿಕೆ ನಮ್ಮ ಪ್ರಥಮ ಆದ್ಯತೆ. ಸರ್ಕಾರ ಕೃಷಿಕರಿಗೆ ಹಲವು ಸವಲತ್ತುಗಳನ್ನು ನೀಡುತ್ತಿದೆ. ರೈತರು ಮತ್ತು ಪಿಎಂ ಕಿಸಾನ್ ಫಲಾನುಭವಿಗಳು ಈ ಸವಲತ್ತುಗಳ ಬಳಕೆಯನ್ನು ಅರಿತುಕೊಳ್ಳಬೇಕು. ಕಿಸಾನ್‌ ಕ್ರೆಡಿಟ್‌ ಕಾರ್ಡ್ ಪ್ರಸ್ತುತ ದಿನದಲ್ಲಿ ಚಾಲ್ತಿಯಲ್ಲಿದೆ. ಇದರ ಮಾಹಿತಿಯನ್ನು ಎಲ್ಲರಿಗೂ ತಿಳಿಸಬೇಕಾಗಿದೆ ಎಂದು ಮಂಗಳೂರಿನ ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ವಲಯದ ಮುಖ್ಯಸ್ಥ ಮಹೇಶ್‌  ಕಜೆ ಹೇಳಿದರು.

ಕೋಡಿಂಬಾಡಿಗ್ರಾಮ ಪಂಚಾಯತ್‌ನಲ್ಲಿ ಮಂಗಳೂರಿನ ಯೂನಿಯನ್ ಬ್ಯಾಂಕ್ ವಲಯದ ವತಿಯಿಂದ ಆಯೋಜಿಸಿದ ಕಿಸಾನ್‌ ಕ್ರೆಡಿಟ್‌ ಕಾರ್ಡ್ ಆಂದೋಲನದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಕೋಡಿಂಬಾಡಿಗ್ರಾಮ ಪಂಚಾಯತ್‌ನ ಅಧ್ಯಕ್ಷ ರಾಮಚಂದ್ರ ಪೂಜಾರಿ ಮಾತನಾಡಿ ಪ್ರಧಾನ ಮಂತ್ರಿಗಳ ಸಾಮಾಜಿಕ ಸುರಕ್ಷಾ ಯೋಜನೆಗಳಾದ ಸುರಕ್ಷಾ ಭೀಮಯೋಜನೆ, ಜೀವನ ಜ್ಯೋತಿ ಭೀಮ ಯೋಜನೆ ಹಾಗೂ ಅಟಲ್ ಪೆನ್ಶನ್ ಯೋಜನೆಗಳ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ವಲಯದ ಶಾಖಾ ಪ್ರಬಂಧಕರಾದ ನಾಗರಾಜು, ಈಶ್ವರ ನಾಯ್ಕ್, ಭಾವೇಶ್ ಮತ್ತು, ಸ್ಮಿತೇಶ್ ಉಪಸ್ಥಿತರಿದ್ದರು ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ರಮೇಶ್ ವಂದಿಸಿದರು.

LEAVE A REPLY

Please enter your comment!
Please enter your name here