ಡೊನ್ ಬೊಸ್ಕೊ ಕ್ಲಬ್ ಪದಾಧಿಕಾರಿಗಳ ಪದ ಪ್ರದಾನ ಸಮಾನ ಮನಸ್ಕ ಸದಸ್ಯರ ನಿಸ್ವಾರ್ಥ ಚಿಂತನೆ, ತ್ಯಾಗದಿಂದಾಗಿ ಕ್ಲಬ್ ಬೆಳೆದಿದೆ-ವಂ|ಲಾರೆನ್ಸ್

0

ಪುತ್ತೂರು: ಸುಮಾರು 55 ವರ್ಷದ ಹಿರಿಯ ಕ್ಲಬ್ ಎನಿಸಿದ ಈ ಡೊನ್ ಬೊಸ್ಕೊ ಕ್ಲಬ್ ನಲ್ಲಿನ ಹಿರಿ-ಕಿರಿಯರ ಸಮಾನ ಮನಸ್ಕ ಸದಸ್ಯರ ನಿಸ್ವಾರ್ಥ ಚಿಂತನೆ ಹಾಗೂ ತ್ಯಾಗದ ಪ್ರತಿಫಲವಾಗಿ ಕ್ಲಬ್ ಹೆಸರು ಪಡೆದಿದೆ ಮಾತ್ರವಲ್ಲದೆ ಸಮುದಾಯದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಬೆಳಕು ಚೆಲ್ಲುತ್ತಾ ಹೆಗ್ಗುರುತಾಗಿಯೂ ಕ್ಲಬ್ ಬೆಳೆದಿದೆ ಎಂದು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಹೇಳಿದರು.

ಎ.30 ರಂದು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿದ ಡೊನ್ ಬೊಸ್ಕೊ ಕ್ಲಬ್ ನ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾಗಳಿಗೆ ಹೂಗುಚ್ಛ ನೀಡುವ ಮೂಲಕ ಪದ ಪ್ರದಾನ ನೆರವೇರಿಸಿ ಮಾತನಾಡಿದರು. ಡೊನ್ ಬೊಸ್ಕೊರವರು ಕ್ಲಬ್ ನ ಪ್ರೇರಕ ಸಂತರಾಗಿದ್ದು ಯುವಸಮುದಾಯವನ್ನು ಸಂಘಟಿತರಾಗಿಸುವ ಮೂಲಕ ಕ್ರೈಸ್ತ ಪವಿತ್ರಸಭೆಯನ್ನು ದೇವರ ವಿಶ್ವಾಸದ ಬೆಳಕನ್ನಾಗಿ ಜೀವಾಳವಾಗಿಸಬೇಕೆಂದು ಕಾರ್ಯೋನ್ಮುಖರಾದವರಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ನೂತನ ಅಧ್ಯಕ್ಷರಾಗಿ ಪುನಾರಾಯ್ಕೆಗೊಂಡಿರುವ ಫೆಬಿಯನ್ ಗೋವಿಯಸ್ ರವರು ಮಾತನಾಡಿ, ಪದ ಪ್ರದಾನ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಕ್ಲಬ್ ನಲ್ಲಿನ ಸದಸ್ಯರ ಕುಟುಂಬಿಕರನ್ನು ಒಗ್ಗೂಡಿಸುವುದಾಗಿದೆ. ಕ್ಲಬ್ ನಲ್ಲಿನ ಸದಸ್ಯರ ದೂರದೃಷ್ಟಿತ್ವದ ಚಿಂತನೆ ಹಾಗೂ ನೀವು ಮುಂದುವರೆಯಿರಿ ಎನ್ನುವ ಬೆನ್ನು ತಟ್ಟುವ ಪ್ರೋತ್ಸಾಹದ ಮಾತುಗಳಿಂದ ಈ ಕ್ಲಬ್ ಮುಂಚೂಣಿ ಕ್ಲಬ್ ಆಗಿ ಮುನ್ನೆಡೆದಿದೆ. ಕ್ಲಬ್ ನಲ್ಲಿನ ಸದಸ್ಯರ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ ಎಂದರು.

ವೇದಿಕೆಯಲ್ಲಿ ನಿರ್ಗಮನ ಉಪಾಧ್ಯಕ್ಷ ಸಿಲ್ವೆಸ್ತರ್ ಡಿ’ಸೋಜ, ನಿರ್ಗಮನ ಕೋಶಾಧಿಕಾರಿ ರೊನಾಲ್ಡ್ ಮೊಂತೇರೋ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ರೋಹನ್ ಡಾಯಸ್ ರವರು ಉಪಸ್ಥಿತರಿದ್ದರು. ನಿರ್ಗಮನ ಕಾರ್ಯದರ್ಶಿ ಜೋನ್ ಕುಟಿನ್ಹಾ ಸ್ವಾಗತಿಸಿ, ನೂತನ ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ ವಂದಿಸಿದರು. ಸದಸ್ಯ ಅನಿಲ್ ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.

ಪದ ಪ್ರದಾನ…

2022-23ನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಫೆಬಿಯನ್ ಗೋವಿಯಸ್, ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ, ಉಪಾಧ್ಯಕ್ಷ ಪ್ರಕಾಶ್ ಸಿಕ್ವೇರಾ, ಜೊತೆ ಕಾರ್ಯದರ್ಶಿ ಆಲನ್ ಮಿನೇಜಸ್,ಕೋಶಾಧಿಕಾರಿ ರೋಯ್ಸ್ ಪಿಂಟೋ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ತರ್ ಗೊನ್ಸಾಲ್ವಿಸ್, ಸಮಿತಿ ಸದಸ್ಯರಾದ ಜೋನ್ ಪೀಟರ್ ಡಿ’ಸಿಲ್ವ, ಅರುಣ್ ಪಿಂಟೋ, ವಾಲ್ಟರ್ ಸಿಕ್ವೇರಾ, ವಿಶಾಲ್ ಮೊಂತೇರೋ, ವಿಕ್ಟರ್ ಶರೂನ್ ಡಿ’ಸೋಜ, ರಿಚರ್ಡ್ ಪಿಂಟೋ, ರೋಶನ್ ಡಾಯಸ್, ಜೋನ್ ಕುಟಿನ್ಹಾ, ಸಿಲ್ವೆಸ್ತರ್ ಡಿ’ಸೋಜ, ರೊನಾಲ್ಡ್ ಮೊಂತೇರೋ, ರೋಹನ್ ಡಾಯಸ್, ವರ್ಗೀಸ್ ಡಾಯಸ್, ಅರುಣ್ ರೆಬೆಲ್ಲೋ, ಪುತ್ತೂರ್ಚೆ ನೆಕೆತ್ರ್ ಸಂಪಾದಕ ಜೋನ್ ಬಿ.ಸಿಕ್ವೇರಾ, ಕ್ಲಬ್ ಹೌಸಿಂಗ್ ಪ್ರಾಜೆಕ್ಟ್ ನ ಕಾರ್ಯದರ್ಶಿ ಜ್ಯೋ ಡಿ’ಸೋಜರವರಿಗೆ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಹೂಗುಚ್ಛ ನೀಡಿ ಪದ ಪ್ರದಾನ ಮಾಡಿದರು.

ಸೇರ್ಪಡೆ..
ಈ ಸಂದರ್ಭದಲ್ಲಿ ಕ್ಲಬ್ ಗೆ ನೂತನವಾಗಿ ಸೇರ್ಪಡೆಯಾದ ವಿಜಯ್ ಡಿ’ಸೋಜ ಮುರ ಹಾಗೂ ರಾಯನ್ ಡಾಯಸ್ ಕಲ್ಲಾರೆರವರನ್ನು ಹೂ ನೀಡುವ ಮೂಲಕ ಅಭಿನಂದಿಸಲಾಯಿತು. ನೂತನ ಸದಸ್ಯರ ಪರಿಚಯವನ್ನು ಉಪಾಧ್ಯಕ್ಷ ಪ್ರಕಾಶ್ ಸಿಕ್ವೇರಾರವರು ಪರಿಚಯ ಮಾಡಿದರು.

LEAVE A REPLY

Please enter your comment!
Please enter your name here