ಕುದ್ಮಾರು ಶ್ರೀ ಶಿರಾಡಿ ರಾಜನ್ ದೈವದ ಕಟ್ಟೆಯ ಪ್ರತಿಷ್ಠಾಪನೆ, ನೇಮೋತ್ಸವದ ಕುರಿತು ಸಮಾಲೋಚನಾ ಸಭೆ

0

 

ಕಾಣಿಯೂರು: ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ದೈಪಿಲ ದ್ವಾರದ ಬಳಿ ಕಟ್ಟತ್ತಾರು ಎಂಬಲ್ಲಿ ಶ್ರೀ ಶಿರಾಡಿ ದೈವದ ಕಟ್ಟೆಯ ಪ್ರತಿಷ್ಠಾಪನೆ ಹಾಗೂ ನೇಮೋತ್ಸವವು ಮೇ.19  ಮತ್ತು 20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗ್ರಾಮದ ಎಲ್ಲಾ ಜನತೆಯ ಸಹಕಾರದೊಂದಿಗೆ ನಡೆಯಲಿದ್ದು, ವೈದಿಕ ಕಾರ್ಯಕ್ರಮ, ನೇಮೋತ್ಸವವು ಉತ್ತಮ ರೀತಿಯಲ್ಲಿ ನಡೆಯಲಿದೆ.

 

 

ಈ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಮುಂದಾಗಬೇಕು ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ಆಗಿರುವ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು. ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ದೈಪಿಲ ದ್ವಾರದ ಬಳಿ ಇರುವ ಕಟ್ಟತ್ತಾರು ಎಂಬಲ್ಲಿ ಶ್ರೀ ಶಿರಾಡಿ ದೈವದ ಕಟ್ಟೆಯ ಪ್ರತಿಷ್ಠಾಪನೆ ಮತ್ತು ನೇಮೋತ್ಸವದ ಕುರಿತು ಮೆ ೧ರಂದು ಕುದ್ಮಾರು ಅನ್ಯಾಡಿ ಚಾವಡಿಯಲ್ಲಿ ನಡೆದ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಅನ್ಯಾಡಿ ಬಾರಿಕೆ ಕುಟುಂಬದ ಹಿರಿಯರಾದ ಪದ್ಮಯ್ಯ ಗೌಡ ಅನ್ಯಾಡಿ, ಪದ್ಮಯ್ಯ ಗೌಡ ಕೆಡೆಂಜಿ, ಮೋನಪ್ಪ ಗೌಡ ಅನ್ಯಾಡಿ, ದೇವಣ್ಣ ಗೌಡ ಅನ್ಯಾಡಿ, ಆಡಳಿತ ಸಮಿತಿ ಉಪಾಧ್ಯಕ್ಷ ಆನಂದ ಅನ್ಯಾಡಿ, ಚೆನ್ನಪ್ಪ ಗೌಡ ನೂಜಿ, ದೇವಪ್ಪ ಗೌಡ ನಡುಮನೆ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ.ಕೆಡೆಂಜಿ, ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಕೋಶಾಧಿಕಾರಿ ಉಮೇಶ್ ಕೆರೆನಾರು, ಅನ್ಯಾಡಿ ಬಾರಿಕೆ ಕುಟುಂಬದ ಅಧ್ಯಕ್ಷ ಯೋಗೀಶ್ ಕೆಡೆಂಜಿ, ಆಡಳಿತ ಸಮಿತಿ ಸದಸ್ಯರಾದ ಜನಾರ್ದನ ಗೌಡ ಕೂರಮನೆ, ಲೋಕೇಶ್ ಬಿ.ಎನ್, ಯತೀಶ್ ನಡುಮನೆ, ಪದ್ಮನಾಭ ದೋಳ,ಸತೀಶ್ ಹೊಸವೊಕ್ಲು, ಪ್ರವೀಣ್ ಅನ್ಯಾಡಿ, ನಾರ್ಣಪ್ಪ ಗೌಡ ಅನ್ಯಾಡಿ, ಸೋಮಪ್ಪ ಗೌಡ ಅನ್ಯಾಡಿ, ಆನಂದ ಎ, ದೇವಣ್ಣ ಗೌಡ ಅನ್ಯಾಡಿ, ನಾರ್ಣಪ್ಪ ಗೌಡ, ಪವನ್ ಗೌಡ ಅನ್ಯಾಡಿ, ಶಿವಪ್ಪ ಗೌಡ ಕಾಪೆಜಾಲು, ಬಾಬು ಗೌಡ ಅನ್ಯಾಡಿ, ಮುತ್ತಪ್ಪ ಅನ್ಯಾಡಿ, ಅಶೋಕ್ ಅನ್ಯಾಡಿ, ಯೋಗಿಶ್, ರಂಜಿತ್, ಸತೀಶ ಅನ್ಯಾಡಿ, ಕುಶಾಲಪ್ಪ ಗೌಡ ಅನ್ಯಾಡಿ, ಜಯರಾಮ ಅನ್ಯಾಡಿ, ಚಿನ್ನಮ್ಮ ಅನ್ಯಾಡಿ, ವಿಶ್ವನಾಥ ಅನ್ಯಾಡಿ, ಕಮಲ ಅನ್ಯಾಡಿ, ತಾರಾ ಅನ್ಯಾಡಿ, ಪುಷ್ಪಲತಾ ಕುದ್ಮಾರು, ಇಂದಿರಾವತಿ ಅನ್ಯಾಡಿ, ಗಿರಿಜಾ ಅನ್ಯಾಡಿ, ರೇವತಿ ಕುದ್ಮಾರು, ಶೂರಪ್ಪ ಗೌಡ, ಮೋನಪ್ಪ ಗೌಡ, ಮಹಾಲಿಂಗ, ಎಲ್ಯಣ್ಣ ಗೌಡ, ಶಶಿಕಾಂತ್ ಎ ಮತ್ತೀತರರು ಉಪಸ್ಥಿತರಿದ್ದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ.ಕೆಡೆಂಜಿ ಸ್ವಾಗತಿಸಿದರು.

ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ದೈಪಿಲ ದ್ವಾರದ ಬಳಿ ಕಟ್ಟತ್ತಾರು ಎಂಬಲ್ಲಿ ಶ್ರೀ ಶಿರಾಡಿ ದೈವದ ಕಟ್ಟೆಯ ಪ್ರತಿಷ್ಠಾಪನೆ ಹಾಗೂ ನೇಮೋತ್ಸವವು ಮೆ ೧೯, ೨೦ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

LEAVE A REPLY

Please enter your comment!
Please enter your name here