ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನಾ ಜಾತ್ರೋತ್ಸವ- ದೇವರ ಬಲಿ ಉತ್ಸವ

0

 

ಕಾಣಿಯೂರು : ಕಾಮಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ಜಾತ್ರೋತ್ಸವ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಪ್ರಶ್ನಾಪರಿಹಾರ ಕಾರ್ಯಕ್ರಮ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಎ.೨೮ರಿಂದ ಆರಂಭಗೊಂಡು ಎ.೩೦ರವರೆಗೆ ನಡೆಯಿತು. ಎ. ೨೧ರಂದು ಗೊನೆ ಕಡಿಯುವ ಮುಹೂರ್ತದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಎ. ೨೮ರಂದು ಸಂಜೆ ತಂತ್ರಿಗಳ ಆಗಮನ, ರಾತ್ರಿ ಸುದರ್ಶನ ಹೋಮ, ಬಾಧೆಗಳ ಉಚ್ಚಾಟನೆ ನಡೆಯಿತು. ಎ.೨೯ರಂದು ಬೆಳಿಗ್ಗೆ ೭ರಿಂದ ಗಣಪತಿ ಹೋಮ, ತೋರಣ ಮುಹೂರ್ತ, ಹಸಿರು ಕಾಣಿಕೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮೃತ್ಯುಂಜಯ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ ಶ್ರೀ ಸದಾಶಿವ ಸಾಂಸ್ಕೃತಿಕ ಕಲಾಕೇಂದ್ರ ಅಗಳಿ ಇದರ ಪ್ರಾಯೋಜಕತ್ವದಲ್ಲಿ ವಿಠಲ ನಾಯ್ಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.


ರಾತ್ರಿ ೭.೩೦ರಿಂದ ಪ್ರಾರ್ಥನೆ, ವಾಸ್ತು ರಾಕ್ಷೆಘ್ನ ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಎ.೩೦ರಂದು ಬೆಳಿಗ್ಗೆ ಗಣಪತಿ ಹವನ, ಬಿಂಬ ಶುದ್ಧಿ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೬ರಿಂದ ಕುಣಿತ ಭಜನೆ, ದೀಪಾರಾಧನೆ, ರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ರಾತ್ರಿ ಉಳ್ಳಾಕುಲು ಮತ್ತು ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ, ಪ್ರಧಾನ ಅರ್ಚಕ ಗಣೇಶ್ ಭಟ್ ಮಾಡಾವು, ಅರ್ಚಕ ರಾಮಕೃಷ್ಣ ಪಿ.ಎಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭವಾನಿ ಶಂಕರ ಅಗಳಿ, ರಾಧಾಕೃಷ್ಣ ಬೈತಡ್ಕ, ಕುಶಾಲಪ್ಪ ಗೌಡ ಅಗಳಿ, ಹರೀಶ್ ಮುಂಡಾಳ, ತಾರಾ ಬೆಳಂದೂರು, ಮಾಧವಿ ಬೊಮ್ಮೊಡಿ, ಲಲಿತಾ ಅಜಿರಂಗಳ ಸೇರಿದಂತೆ ಹಲವಾರು ಮಂದಿ ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here