ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಅನಾವರಣದೊಂದಿಗೆ ಉಚಿತ ಶಿಕ್ಷಣಕ್ಕಾಗಿ ಸುವರ್ಣಾವಕಾಶ ತರಂಗ-2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹತ್ತನೇತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನುಆಯ್ಕೆ ಮಾಡಬಯಸುವ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ತರಂಗ-೨೦೨೨ ,ತೆಂಕಿಲದಲ್ಲಿರುವನರೇಂದ್ರ ಪ.ಪೂ.ಕಾಲೇಜಿನಲ್ಲಿ ಮೇ ೯ ರಿಂದ ೧೧ ರವರೆಗೆ ನಡೆಯಲಿದೆ.

 

ವಿವಿಧ ಸ್ತರದ ವಿದ್ಯಾರ್ಥಿಗಳಿಗೆ ಅತ್ಯುತ್ತಮಗುಣಮಟ್ಟದ ಪದವಿ ಪೂರ್ವ ಶಿಕ್ಷಣವನ್ನು ನೀಡುವುದು ನಮ್ಮ ಸಂಸ್ಥೆಯ ಉದ್ದೇಶ.ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮತ್ತುಅವರ ಪ್ರತಿಭೆಯಅಭಿವ್ಯಕ್ತಿಗೆ ಪೂರಕವಾದ ವೇದಿಕೆಯನ್ನುಕಲ್ಪಿಸುವುದೇ ಈ ಕಾರ್‍ಯಕ್ರಮದಉದ್ದೇಶವಾಗಿದೆ. ೨೦೨೧-೨೨ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಕನ್ನಡ ಮತ್ತುಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರದಲ್ಲಿಅವಕಾಶವಿದೆ.

ಇದರಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯನ್ನು ವೃದ್ಧಿಸುವ ನಿಟ್ಟಿನಲ್ಲಿಯೋಗ,ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಬಲಪಡಿಸುವಂತಹ ಚಟುವಟಿಕೆ ಆಧಾರಿತಕಲಿಕೆಯನ್ನು ಈ ಕಾರ್ಯಾಗಾರದಲ್ಲಿ ಅಯೋಜಿಸಲಾಗಿದೆ. ಕ್ರಾಫ್ಟ್‌ಡಿಸೈನ್, ಅಬಾಕಸ್ ತರಗತಿಗಳು, ಪೇಂಟಿಂಗ್,ಮ್ಯೂಸಿಕ್ ಮತ್ತುಡಾನ್ಸ್ ಗೆ ಪೂರಕವಾದ ಚಟುವಟಿಕೆಗಳು,ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸುಲಭೋಪಾಯಗಳು ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನರೇಂದ್ರ ಪ.ಪೂ.ಕಾಲೇಜಿನ ೨೦೨೨-೨೩ ಶೈಕ್ಷಣಿಕ ವರ್ಷದಉಚಿತ ಶಿಕ್ಷಣ ಸೌಲಭ್ಯದಡಿಯಲ್ಲಿಉಚಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಕಾಲೇಜಿನ ವತಿಯಿಂದರಾಮಾಯಣ-ಮಹಾಭಾರತ ಪರೀಕ್ಷೆಯನ್ನು ನಡೆಸಲಾಗುತ್ತದೆ.ಪರೀಕ್ಷೆ ಬರೆದುಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಮೊದಲ ೫ ವಿದ್ಯಾರ್ಥಿಗಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯದೊರೆಯಲಿದೆ.ಮತ್ತು ಪ್ರಥಮ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಃಇಃಂಸಂಯೋಜನೆಯಲ್ಲಿಉಚಿತಶಿಕ್ಷಣವನ್ನು ಪಡೆಯಲು ಬಯಸುವವರುಕಾಲೇಜಿನ ವತಿಯಿಂದ ನಡೆಸುವಅದರ ಪ್ರವೇಶ ಪರೀಕ್ಷೆಯನ್ನು ಬರೆದುಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಮೊದಲ ೫ ವಿದ್ಯಾರ್ಥಿಗಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯದೊರೆಯಲಿದೆ.ಜೊತೆಗೆಎಸೆಸೆಲ್ಸಿಯಲ್ಲಿ ಶೇ.೯೮ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.

 

ಮೂರು ದಿನಗಳ ಕಾಲ ಉಚಿತವಾಗಿ ನಡೆಯುವ ಈ ಶಿಬಿರವು ಪ್ರತಿದಿನ ಬೆಳಗ್ಗೆ ೧೦ ರಿಂದ ಸಂಜೆ ೩:೩೦ ರವರೆಗೆ ನಡೆಯಲಿದೆ.ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು 9481917888/08251-298555ನಂಬರ್ ಗೆ ಸಂಪರ್ಕಿಸುವ ಮೂಲಕ ಮೇ ೬ ರ ಒಳಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.ಎಂದು ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಪ್ರಥಮ ಪಿಯುಸಿಗೆ ದಾಖಲಾತಿಆರಂಭಗೊಂಡಿದ್ದು,ಹೆಚ್ಚಿನ ಮಾಹಿತಿಗಾಗಿಕಾಲೇಜಿನ ವೆಬ್‌ಸೈಟ್‌www.narendrapu.vivekanandaedu.orgಅಥವಾE-mail:[email protected] ಅಥವಾ ಮೊಬೈಲ್ ಸಂಖ್ಯೆ:9481917888,08251-298555ನ್ನು ಸಂಪರ್ಕಿಸಬಹುದು. ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.