ಪುತ್ತೂರು: ಪುಣಚ ಗ್ರಾಮದ ಅಜೇರು ನಿವಾಸಿ ದಿ. ಮಿಂಗೆಲ್ ಡಿ’ಸೋಜ ಹಾಗೂ ದಿ. ರೀತಾ ಡಿ’ಸೋಜರವರ ಪುತ್ರ, ಮಣೆಲ ಕ್ರಿಸ್ತಾರಾಯ ಚರ್ಚ್ ಮಾಜಿ ಉಪಾಧ್ಯಕ್ಷ ದನ್ವೇಲ್ ಡಿ’ ಸೋಜ (೬೪ ವ.)ರವರು ಎ. ೩೦ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಎರ್ಮಿನ್ ಕುಟಿನ್ಹಾ, ಪುತ್ರರಾದ ಮಂಗಳೂರು ವೆಲೆನ್ಸಿಯಾ ಚರ್ಚ್ ಸಹಾಯಕ ಧರ್ಮಗುರು ಫಾ| ಲ್ಯಾನ್ಸಿ ಡಿ’ಸೋಜ ಹಾಗೂ ವಿಲ್ಫ್ರೆಡ್ ಡಿ’ಸೋಜ, ಸಹೋದರರಾದ ಕೃಷಿಕ ಮಾರ್ಷೆಲ್ ಡಿ’ಸೋಜ, ಜೇರೋಮ್ ಡಿ’ಸೋಜ, ಹಿಲರಿ ಡಿ’ಸೋಜ, ಇನಾಸ್ ಡಿ’ಸೋಜಾ, ಸಹೋದರಿರಾದ ಸಿಸೀಲಿಯಾ ಡಿ’ಸೋಜ, ಮೆನ್ಸಿನ್ ಡಿ’ಸೋಜ, ಜೆಲ್ಪೀನ್ ಡಿ’ಸೋಜರವನ್ನು ಅಗಲಿದ್ದಾರೆ.