ಪುತ್ತೂರಮುತ್ತು ರೈತ ಉತ್ಪಾದನ ಸಂಸ್ಥೆಯಿಂದ ಅಧ್ಯಯನ ಪ್ರವಾಸ

0

ಪುತ್ತೂರು: ಅಮೃತ ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ಉತ್ತೇಜನ ಯೋಜನೆ, ಮೀನುಗಾರಿಕೆ ಇಲಾಖೆ, ಕರ್ನಾಟಕ ಸರಕಾರ ಮತ್ತು ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರ ಹೆಸರುಘಟ್ಟ ಮತ್ತು ಹೆಬ್ಬಾಳ, ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ತರಬೇತಿ ಕಾರ್ಯಾಗಾರ, ಅಧ್ಯಯನ ಪ್ರವಾಸ ಮತ್ತು ಕ್ಷೇತ್ರ ವೀಕ್ಷಣೆ ಕಾರ್ಯಕ್ರಮವು ಎ. 26 ರಿಂದ 28ರವರೆಗೆ ನಡೆಯಿತು.

ಬೆಂಗಳೂರಿನ ಹೆಸರುಘಟ್ಟದ ಮೀನುಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ಉದ್ಘಾಟಿಸಿ, ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು. ಮೀನುಗಾರಿಕಾ ನಿರ್ದೇಶಕ ರಾಮಾಚಾರ್ಯ ಮತ್ತು 4ನೇ ಜನರೇಶನ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ರೆಡ್ಡಿ ಭಾಗವಹಿಸಿ ಶುಭಹಾರೈಸಿದರು. ಎ 26 ರಿಂದ ಎ 28 ರವರೆಗೆ ಒಲನಾಡಿನ ಮೀನುಗಾರಿಕೆ ರೈತ ಉತ್ಪದಕ ಸಂಸ್ಥೆಗಳ ಮೂರು ದಿನದ ತರಬೇತಿ ಕಾರ್ಯಾಗಾರ ಹಾಗೂ ಅಧ್ಯಯನ ಪ್ರವಾಸ ನಡೆಯಿತು. ಈ ಸಂಧರ್ಭದಲ್ಲಿ ಪುತ್ತೂರಮುತ್ತು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ ಮತ್ತು ನಿರ್ದೇಶಕರು, ಸದಸ್ಯರು ಸೇರಿ ಇಪ್ಪತ್ತೈದು ಮಂದಿಯ ತಂಡ ಭಾಗವಹಿಸಿತ್ತು.

LEAVE A REPLY

Please enter your comment!
Please enter your name here