ಹನಿಯೂರು ಗುತ್ತು ತರವಾಡಿನಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

0

  • ಒಂದು‌ ಮಾದರಿ ಕಾರ್ಯಕ್ರಮ ಇದಾಗಬೇಕು :ಡಾ. ಕೆ.ಸಿ. ನಾಯ್ಕ್

ಪುತ್ತೂರು: ಕೊಡಿಪಾಡಿ ಗ್ರಾಮದ ಹಣಿಯೂರು ಗುತ್ತುವಿನಲ್ಲಿ ಮೇ.14ರಿಂದ ಮೇ.18ರ ವರೆಗೆ ನಡೆಯಲಿರುವ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನ ಸಭೆಯು ಹನಿಯೂರು ಗುತ್ತು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಕೆ.ಸಿ. ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ಮೇ.1 ರಂದು  ಹನಿಯೂರುಗುತ್ತು ತರವಾಡಿನಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ  ಡಾ.ಕೆ.ಸಿ. ನಾಯ್ಕ್ ರವರ ಮಾತನಾಡಿ  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ  ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರು ಪ್ರಯತ್ನಿಸಬೇಕು.  ನಮ್ಮ ಈ ಕಾರ್ಯಕ್ರಮದಲ್ಲಿ ಸಂಬಂದಿಕರ ಸಹಿತ  ಗ್ರಾಮಸ್ಥರನ್ನು  ಒಟ್ಟು ಸೇರಿಸಿಕೊಳ್ಳುವ ಪ್ರಯತ್ನ ನಮ್ಮಿಂದಾಗಬೇಕು. ಮೇ.14 ರಂದು ನಡೆಯುವ ಹೊರೆಕಾಣಿಕೆ ಉತ್ತಮ ರೀತಿಯಲ್ಲಿ ನಡೆಯಬೇಕು.  ಒಟ್ಟಾರೆಯಾಗಿ ನಮ್ಮ ತರವಾಡಿನ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮವಾಗಿ ಮಾಡಬೇಕು. ಇದಕ್ಕೆ ಕುಟುಂಬದ ಸದಸ್ಯರುಗಳ ಸರ್ವ ರೀತಿಯ ಸಹಕಾರ ಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಧುಮಿತ್ರರು ಹಾಗೂ  ಕುಟುಂಬದ ಸದಸ್ಯರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬಳಿಕ ಕಾರ್ಯಕ್ರಮದ ವಿವಿಧ ರೂಪುರೇಶೆಗಳನ್ನು ತಯಾರಿಸಲಾಯಿತು. ಈ ಸಂದರ್ಭದಲ್ಲಿ ಬಂಧುಮಿತ್ರರಾದ ಗುತ್ತುಗೆದಾರ  ರಾಧಾಕೃಷ್ಣ ನಾಯ್ಕ್ , ಏಳ್ನಾಡು ಗುತ್ತುವಿನ ರತ್ನಾಕರ‌ ನಾಯ್ಕ್,  ಸಂತೋಷ್ ಕುಮಾರ್ ನಾಯ್ಕ್ ಕಾಯರ್ ಮಜಲ್, ಗುತ್ತಿಗೆದಾರ ವಸಂತ ಮಜಲ್, ನವೀನ್ ಚಂದ್ರ ನಾಯ್ಕ್  ಕಜೆ,  ಮನೋಹರ್ ನಾಯ್ಕ್ ಕೊಳಕ್ಕಿಮಾರ್,  ಗಿರಿಧರ ಗೋಮುಖ, ದೀರಜ್ ಹಿರ್ಕುಡೆಲ್, ಕೆ. ವಿನಯಾನಂದ ಕಾನಡ್ಕ, ರಮೇಶ್ ಕೆ.  ಹಾಗೂ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here