ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವಾರ್ಷಿಕ ಮಹಾಸಬೆ, ಸಮಿತಿ ರಚನೆ

0

ಪುತ್ತೂರು : ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ವಾರ್ಷಿಕ ಮಹಾ ಸಬೆ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ಮೇ.1 ರಂದು ಕ್ಷೇತ್ರದ ವಠಾರದಲ್ಲಿ ನಡೆಯಿತು. ಕಾರ್ಯದರ್ಶಿ ಪ್ರಕಾಶ್ ಮರದಮೂಲೆ ವಾರ್ಷಿಕ ಲೆಕ್ಕ ಪತ್ರ ಮಂಡಿಸಿ ಸಭೆಯಿಂದ ಅನುಮೋದನೆ ಪಡೆದುಕೊಳ್ಳಲಾಯಿತು. ಬಳಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಸದಾನಂದ ರೈ ಬೋಳಂಗೂಡ್ಲು ಉಪಸ್ಥಿತರಿದ್ದರು. ಪೂಜಾ ಕರ್ಮಿ ಮಾಧವ ಸಾಲಿಯಾನ್ ಹಾಗೂ ಸಮಿತಿ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

ನೂತನ ಸಮಿತಿ ರಚನೆ;

ಶಬರಿನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಬೆಳಿಯಪ್ಪ ಗೌಡ ಶಬರಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಮರದಮೂಲೆ ಪುನರ್ ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸದಾನಂದ ಬೋಳಂಕೂಡ್ಲು, ಕೋಶಾಧಿಕಾರಿಯಾಗಿ ಭಾಸ್ಕರ ಹೆಗ್ಗಡೆ, ಜತೆ ಕಾರ್ಯದರ್ಶಿಯಾಗಿ ವಿನಯ ದೇವಸ್ಯರವರನ್ನು ಆಯ್ಕೆಮಾಡಲಾಯಿತು. ಸದಸ್ಯರಾದ ಸೇಸಪ್ಪ ಪೂಜಾರಿ ಕಡಮಗದ್ದೆ, ಗುರುಕಿರಣ್ ರೈ ಸುಳ್ಯಪದವು, ರೂಪೇಶ್ ಮರದಮೂಲೆ, ಅಜಿತ್ ಕಾಯರ್‌ಪದವು, ಚಂದ್ರಶೇಖರ ಸುಳ್ಯಪದವು, ಸೇಸಪ್ಪ ನಾಯ್ಕ ಪದಡ್ಕ, ದಿನೇಶ್ ಮರದಮೂಲೆ, ರಾಜೇಶ್ ಸುಳ್ಯಪದವು, ಈಶ್ವರ ನಾಯ್ಕ ಬೋಳಂಕೂಡ್ಲು, ನವೀನ ಎಸ್.ಕೆ ಪದಡ್ಕ, ಜಯಕೃಷ್ಣ ಕಡಮಗದ್ದೆ, ಚಂದ್ರಶೇಖರ ಅಜಡ್ಕ, ರಂಜಿತ್ ಮರದಮೂಲೆ, ಕರುಣಾಕರ ಕಜಮೂಲೆ, ಅಚ್ಚುತ ಬೀರಮೂಲೆ, ಈಶ್ವರ ಮೈಕುಳಿ, ಉದಯ ದೇವಸ್ಯ, ವಾಮನ ಮೂಲ್ಯ ಸುಳ್ಯಪದವು, ಕೃಷ್ಣಮೋಹನ ಭಟ್ ಕೆದುಮೂಲೆ, ಸುಂದರ ಪೂಜಾರಿ ಸುಳ್ಯಪದವು, ಈಶ್ವರ ಮೂಲ್ಯ ಕೊಯಿಲ, ಸುಧೀರ್ ಶಬರಿನಗರ, ಸತೀಶ್ ಬಟಂಗಳ, ವಿಠಲ ಸುವರ್ಣ ಸುಳ್ಯಪದವು, ಚನಿಯಪ್ಪ ನಾಯ್ಕ ನಿಡಿಯಡ್ಕ, ರಮಾಕಾಂತಿ ರೈ ಬೋಳಂಕೂಡ್ಲು ತೇಜಸ್ವಿನಿ ಶಬರಿನಗರ, ವಿಮಲಾ ಶಬರಿನಗರ, ದಾಮೋದರ ಕನ್ನಡ್ಕ, ಬಾಬು ಶಬರಿನಗರ, ಜಗನ್ನಾಥ ರೈ ಸುಳ್ಯಪದವು, ಸುರೇಶ ಶಬರಿನಗರ, ಜಗದೀಶ್ ರೈ ಬೋಳಂಕೂಡ್ಲು, ಪ್ರವೀಣ್ ಎಂ. ಮರದಮೂಲೆ,
ದಾಮೋದರ ಎಂ. ಮರದಮೂಲೆ, ನಯನ ಎಸ್. ಪದಡ್ಕರವರನ್ನು ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here