ಭಕ್ತರಿಂದ ಬೇಡಿಕೆ ಇಮ್ಮಡಿಗೊಳಿಸಿದ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು:ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ಭಕ್ತರಿಗಾಗಿ ಪ್ರತಿ ತಿಂಗಳು ನಡೆಯುವ ಉಚಿತ ಆರೋಗ್ಯ ಶಿಬಿರದ ಎರಡನೇ ಹಂತದ ಶಿಬಿರವು ಮೇ.1ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಶಿಬಿರದಲ್ಲಿ ಕಳೆದ ಪ್ರಥಮ ಹಂತಕ್ಕಿಂದ ದುಪ್ಪಟ್ಟು ಸಂಖ್ಯೆಯಲ್ಲಿ ಜನರು ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಉಚಿತ ವೈದ್ಯಕೀಯ ಶಿಬಿರವು ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಸಲಾಗುತ್ತಿದ್ದು ಇದರ ಉದ್ಘಾಟನೆ ಏ.3ರಂದು ನಡೆದಿದ್ದು ಪ್ರಥಮ ಶಿಬಿರದಲ್ಲಿ ಸುಮಾರು 90 ಮಂದಿ ಭಾಗವಹಿಸಿ ಶಿಬಿರದಲ್ಲಿ ವಿವಿಧ ರೀತಿಯ ಪ್ರಯೋಜನ ಪಡೆದುಕೊಂಡರು. ಎರಡನೇ ಬಾರಿಯ ಶಿಬಿರದಲ್ಲಿ ಸುಮಾರು 180ಕ್ಕೂ ಅಧಿಕ ಮಂದಿ ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಉಚಿತ ರಕ್ತ ಪರೀಕ್ಷೆ, ಇಸಿಜಿ ಹಾಗೂ ಔಷಧಿಗಳನ್ನು ಉಚಿತವಾಗಿ ನಡೆಸಲಾಗಿದ್ದು 90ಮಂದಿ ಇಸಿಜಿ, 125ಮಂದಿ ಮಧುಮೇಹ ತಪಾಸಣೆ, 35 ಮಂದಿ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು ನಡೆಸಿಕೊಂಡರು. ತಪಾಸಣೆ ನಡೆಸಿ ಅವರಿಗೆ ಅಗತ್ಯವಾದ ಔಷಧಿಗಳನ್ನು ಸ್ಥಳದಲ್ಲಿಯೇ ಉಚಿತವಾಗಿ ವಿತರಿಸಲಾಯಿತು. ಹೃದ್ರೋಗ ತಜ್ಞ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ದೀಕ್ಷಾ, ಡಾ. ಸಾಯಿಪ್ರಕಾಶ್ ಮೊದಲಾದ ತಜ್ಞ ವೈದ್ಯರುಗಳು ಶಿಬಿರವನ್ನು ನಡೆಸಿಕೊಟ್ಟರು. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ, ಮಹಾವೀರ ಆಸ್ಪತ್ರೆ, ಸುಶ್ರುತ ಆಯುರ್ವೇದ ಆಸ್ಪತ್ರೆಗಳು ಹಾಗೂ ಹಲವು ಔಷಧಿ ಕಂಪನಿಗಳು ಶಿಬಿರದಲ್ಲಿ ಸಹಕರಿಸಿದ್ದರು.

ಲಸಿಕೆ ವಿತರಣೆ:

ಶಿಬಿರದಲ್ಲಿ ಕೋವಿಡ್-19 ಲಸಿಕೆ ವಿತರಿಸಲಾಗಿದ್ದು 2ನೇ ಹಂತದ ಲಸಿಕೆ, ಮಕ್ಕಳಿಗೆ ಲಸಿಕೆ ಹಾಗೂ ಬೂಸ್ಟರ್ ಡೋಸ್ ಲಸಿಕೆಗಳನ್ನು ವಿತರಿಸಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ನೇತೃತ್ವದಲ್ಲಿ ಲಸಿಕೆ ವಿತರಿಸಲಾಗಿದ್ದು ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲಸಿಕೆ ವಿತರಣೆಯನ್ನು ಡಾ.ಭವ್ಯ ಉದ್ಘಾಟಿಸಿದರು. ಸುಮಾರು 150 ಮಂದಿ ಲಸಿಕೆಗಳನ್ನು ಪಡೆದುಕೊಂಡರು.

ಶಾಸಕರ ಹುಟ್ಟು ಹಬ್ಬ:

ಮೇ.1ರಂದು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದ ಶಾಸಕ ಸಂಜೀವ ಮಠಂದೂರು ಶಿಬರಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕರನ್ನು ಶಾಲು ಹೊದಿಸಿ, ಪೇಟ ತೊಡಿಸಿ ಹಾರಾರ್ಪಣೆ ಮಾಡಿ ಗೌರವಿಸುವ ಮೂಲಕ ಶಿಬಿರದಲ್ಲಿ ಶಾಸಕರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಶಿಬಿರ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ, ಭೀಮಯ್ಯ ಭಟ್, ವಿಜಯ ಬಿ.ಎಸ್., ಸಹ ಸಂಚಾಲಕರಾದ ರಮೇಶ್ ರೈ ಮೊಟ್ಟೆತ್ತಡ್ಕ, ಹರಿಣಿ ಪುತ್ತೂರಾಯ, ಉದಯ ಕುಮಾರ್ ರೈ ಎಸ್., ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯ ಕುಮಾರ್ ನಾಯರ್, ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಜಗದೀಶ್, ವಿನ್ಯಾಸ್, ಪ್ರೇಮ, ಶಶಿಕಲಾ ನಿರಂಜನ ಶೆಟ್ಟಿ, ಪ್ರಮುಖರಾದ ಶಿವರಾಮ ಆಳ್ವ, ಶ್ರೀಪಾದ ಮುಕ್ರಂಪಾಡಿ, ಹರಿಣಾಕ್ಷ ಮುಕ್ರಂಪಾಡಿ, ಸಂತೋಷ್ ಮೊಟ್ಟೆತ್ತಡ್ಕ, ಗಣೇಶ್ ಮುಕ್ರಂಪಾಡಿ, ಪ್ರಮಿತಾ ಸಿ.ಹಾಸ್, ವೇಣುಗೋಪಾಲ ಶೆಟ್ಟಿ, ಉದಯ ಕುಮಾರ್ ಬಲ್ಲಾಳ್, ಜಯರಾಮ ಪಂಜಳ, ನಾರಾಯಣ ನಾಕ್ ಪಂಜಳ, ಇಂಜಿನಿಯರ್ ರವೀಂದ್ರ ರಾವ್, ಶಿವರಾಮ ಭಟ್, ಕೃಷ್ಣಪ್ಪ ಕೆ., ಸುರೇಶ್ ಉದಯಗಿರಿ, ತೇಜಸ್ ಉದಯಗಿರಿ, ನಾಗೇಶ್ ಸಂಪ್ಯ, ಉಮೇಶ್ ಎಸ್.ಕೆ., ಮಂಜಪ್ಪ ಗೌಡ ಬೈಲಾಡಿ, ರವೀಂದ್ರ ಗೌಡ ಬೈಲಾಡಿ, ರವಿನಾಥ ಗೌಡ ಬೈಲಾಡಿ, ರವೀಂದ್ರ ಪೂಜಾರಿ ಸಂಪ್ಯ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಊಟ, ಉಪಾಹಾರವನ್ನು ಏರ್ಪಡಿಸಲಾಗಿದ್ದು ಬೆಂಗಳೂರಿನ ಉದ್ಯಮಿ ಪ್ರಕಾಶ್ ನಾಕ್ ಮುಕ್ರಂಪಾಡಿಯವರು ಶಿಬಿರದಲ್ಲಿ ಊಟ ಹಾಗೂ ಉಪಾಹಾರದ ಸಂಪೂರ್ಣ ಪ್ರಾಯೋಜಕತ್ವವನ್ನು ನೀಡಿದ್ದರು.

LEAVE A REPLY

Please enter your comment!
Please enter your name here