ಕರುವೇಲು ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

0

  • ಶರೀಅತ್ ವಿಷಯಗಳಲ್ಲಿ ಧಾರ್ಮಿಕ ವಿದ್ವಾಂಸರ ಮಾರ್ಗದರ್ಶನ ಅತ್ಯಗತ್ಯ.-ಅನಸ್ ತಂಙಳ್

 

ಉಪ್ಪಿನಂಗಡಿ :ಕರುವೇಲು ಬದ್ರಿಯಾ ಜುಮಾ ಮಸೀದಿ ಯಲ್ಲಿ ಮೇ 03 ರಂದು ಬೆಳಿಗ್ಗೆ ಸಮಯ 8 :30 ಸಾಮೂಹಿಕ ಪ್ರಾರ್ಥನೆ ಈದ್ ಹಾಗೂ ಖುತುಬ ಪಾರಾಯಣ ಸ್ಥಳೀಯ ಖತೀಬರಾದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ನೇತೃತ್ವದಲ್ಲಿ ನಡೆಯಿತು. ಸರ್ವ ಜನತೆಗೆ ಶುಭಾಶಯ ಕೋರಿ ಮಾತನಾಡಿದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ” ಒಂದು ತಿಂಗಳ ಉಪವಾಸವು ಉಳಿದ ತಿಂಗಳಲ್ಲಿ ದೇವರ ಭಕ್ತಿಯಿಂದ ಮಾನವನಾಗಿ ಬದುಕಲು ಪ್ರೇರಣೆಯಾಗಲಿ. ಧರ್ಮ ಧರ್ಮಗಳ ಮಧ್ಯೆ ಕಚ್ಚಾಟಕ್ಕೆ ಯಾವುದೇ ಧರ್ಮ ಪ್ರೋತ್ಸಾಹಿಸುವುದಿಲ್ಲ, ಸಹ ಧರ್ಮೀಯರನ್ನು ಗೌರವಿಸಲು ಇಸ್ಲಾಂ ಕಲ್ಪಿಸುತ್ತದೆ” ಇಸ್ಲಾಮಿಕ್ ಶರೀಅತ್ ವಿಷಯದಲ್ಲಿ ಧಾರ್ಮಿಕ ವಿದ್ವಾಂಸರ ಮಾರ್ಗದರ್ಶನ ಅತ್ಯಗತ್ಯ. ಅದನ್ನು ಪ್ರಶ್ನಿಸುವವರು ಸ್ವಾರ್ಥಿ ಗಳು ಎಂದರು.

ಜಮಾಅತ್ ಅಧ್ಯಕ್ಷ ಉಮರಬ್ಬ ತೋಜ, ಕಾರ್ಯದರ್ಶಿ ಅಬ್ದುಲ್ ರಝ್ಝಾಕ್, ಕೋಶಾಧಿಕಾರಿ ಮುಹಮ್ಮದ್, ಉಪಾಧ್ಯಕ್ಷ ಬಿ. ಟಿ. ಅಬ್ದುಲ್ ರಹ್ಮಾನ್ ಹಾಜಿ, ಜೊ. ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಝುಲ್ ಝುಲ್,ಸದಸ್ಯರಾದ ನಿಹಾ ಅಬೂಬಕ್ಕರ್, ಅಬ್ದುಲ್ ರಹಿಂ,ಇಬ್ಬ ಸೌದಿ, ಝಿಕ್ರ್ ಹಲ್ಖಾ ಕಮೀಟಿ ಅಧ್ಯಕ್ಷ ಇಬ್ರಾಹಿಂ ಶರೀಫ್ ನಿರ್ಮಾ, ಕೋಶಾಧಿಕಾರಿ ಹನೀಫ್ ಶಾಲೆಬಳಿ SKSSF ಅಧ್ಯಕ್ಷ ಆರಿಫ್ ಎ. ಕೆ. ಯಸ್, ಪ್ರಧಾನ ಕಾರ್ಯದರ್ಶಿ ಆಶಿಕ್ ಹಾಗೂ ಜಮಾಅತಿನ ಇಕ್ಬಾಲ್ ಬೆಂಗಳೂರು, ಹೈದರ್ ದುಬೈ, ಹಕೀಂ ಕುಂಡಾಜೆ, ಶರೀಫ್ ಕೆ. ಯಂ, ಹಾಗೂ ಎಲ್ಲಾ ಹಿರಿಯರು, ಕಿರಿಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here