ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್‌ನಿಂದ ಕಾರ್ಮಿಕ ದಿನಾಚರಣೆ, ರಕ್ತದಾನ ಶಿಬಿರ

0

ಪುತ್ತೂರು: ಇಲ್ಲಿನ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಕಾರ್ಮಿಕ ದಿನಾಚರಣೆ ಮತ್ತು ರಕ್ತದಾನ ಶಿಬಿರ ಮೇ 1ರಂದು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ಮುಂಭಾಗದಲ್ಲಿ ನಡೆಯಿತು.

ಹಿರಿಯ ನೌಕರರಾದ ಕೆ. ಚಂದ್ರಶೇಖರ್ ರಾವ್ ಮತ್ತು ಜಗದೀಶ್‌ರವರು ಧ್ವಜಾರೋಹಣ ನೆರವೇರಿಸಿದರು. ನಂತರ ಯೂನಿಯನ್‌ನ 20 ಮಂದಿ ಸದಸ್ಯರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದರು. ಈ ಸಂದರ್ಭ ರೋಟರಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಬ್ಲಡ್ ಬ್ಯಾಂಕ್‌ನ ವೈದ್ಯ ಡಾ.ರಾಮಚಂದ್ರ ಭಟ್‌ರವರು ಮಾತನಾಡಿ ರಕ್ತದಾನದ ಮಹತ್ವ ವಿವರಿಸಿದರು. ಇನ್ನೋರ್ವ ಅತಿಥಿ ಪುತ್ತೂರು ನಗರ ರೋಟರಿ ಅಧ್ಯಕ್ಷ ಪ್ರಮೋದ್ ಮಲ್ಲಾರರವರು ಕಾರ್ಮಿಕ ದಿನದ ಮಹತ್ವ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ತೀರ್ಥರಾಮ ಎಸ್. ವಳಂಬ್ರರವರು ಮಾತನಾಡಿ, ಕ್ಯಾಂಪ್ಕೋ ಆಡಳಿತ ಮಂಡಳಿ ಮತ್ತು ನೌಕರರ ಸಹಕಾರದಿಂದ ಎಲ್ಲಾ ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದರು. ಹಿರಿಯ ನೌಕರರಾದ ಕೆ.ಚಂದ್ರಶೇಖರ ರಾವ್, ಜಗದೀಶ್ ಕೆ., ಸಂಘದ ಕಾರ್ಯದರ್ಶಿ ನವೀನ್, ಸಂಘದ ಉಪಾಧ್ಯಕ್ಷ ಸುಬ್ರಾಸ್ ಆರ್.ಎಮ್., ಪದಾಧಿಕಾರಿಗಳಾದ ನಿರಂಜನ್ ಎಮ್.ಎಸ್., ಪದ್ಮನಾಭ, ಶೇಷಪ್ಪ ನ್ಯಾಕ್ ಉಪಸ್ಥಿತರಿದ್ದರು. ಅಬ್ದುಲ್ ಖಾದರ್‌ರವರು ಸ್ವಾಗತಿಸಿ, ಪದ್ಮನಾಭರವರು ವಂದಿಸಿದರು.

LEAVE A REPLY

Please enter your comment!
Please enter your name here