ಸವಣೂರು ಸಿ.ಎ ಬ್ಯಾಂಕಿನಲ್ಲಿ ನಿವೃತ್ತ ಸಿಬ್ಬಂದಿ ಕೇಪು ಬಿ ರವರಿಗೆ ಬೀಳ್ಕೊಡುಗೆ

0


ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 20 ವರ್ಷಗಳ ಕಾಲ ಮಾರಾಟ ಗುಮಾಸ್ತರಾಗಿ , ಹಿರಿಯ ಗುಮಾಸ್ತರಾಗಿ ಸೇವೆ ಸಲ್ಲಿಸಿ ಎಪ್ರಿಲ್ 3೦ ರಂದು ವಯೋನಿವೃತ್ತಿ ಹೊಂದಿದ  ಕೇಪು ಬಿ ರವರಿಗೆ ಬೀಳ್ಕೊಡುಗೆ ಸಮಾರಂಭ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ  ಗಣೇಶ್ ನಿಡ್ವಣ್ಣಾಯ ವಹಿಸಿಕೊಂಡು , ಬ್ಯಾಂಕಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಬ್ಯಾಂಕಿನ ಏಳಿಗೆಗೆ ಅವರ ಪಾಲು ಕೂಡ ಇದೆ ಎಂದರಲ್ಲದೆ ಕೇಪು ಬಿ ಇವರನ್ನು ಶಾಲು ಹೊದಿಸಿ, ಹಾರ ಫಲ ಪುಷ್ಪಗಳೊಂದಿಗೆ, ಸ್ಮರಣಿಕೆ ನೀಡಿ ಉಂಗುರ ತೊಡಿಸಿ ಗೌರವಿಸಿದರು.

ಬ್ಯಾಂಕಿನ ನಿದೇಶಕರಾದ ನೋಟರಿ ನ್ಯಾಯವಾದಿ  ಮಹಾಬಲ ಶೆಟ್ಟಿ ಕೊಮ್ಮಂಡ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕೇಪು ರವರು ಬಾಲ್ಯದಲ್ಲಿ ಕಠಿಣ ಪರಿಶ್ರಮದಿಂದ ವಿದ್ಯೆಯನ್ನು ಪಡೆದು, ಗೌರವ ಶಿಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು ಎಂಬುದನ್ನು ಸ್ಮರಿಸಿಕೊಂಡ ಶುಭ ಹಾರೈಸಿದರು. ಉಪಾದ್ಯಕ್ಷರಾದ ತಾರಾನಾಥ ಶುಭ ಹಾರೈಸಿ ಕೇಪುರವರು ಅತ್ಯಂತ ಸರಳ ಸಜ್ಜನಿಕೆಯ ಸಿಬ್ಬಂಧಿಯಾಗಿದ್ದರು ಎಂದರು. ಹಿರಿಯ ನಿರ್ದೇಶಕರಾದ ಶ್ರೀ ಸೋಮನಾಥ ಕನ್ಯಾಮಂಗಲ ಶುಭ ಹಾರೈಸುತ್ತಾ ಸವಣೂರು ಸಿ ಎ ಬ್ಯಾಂಕ್ ಪರಿಶಿಷ್ಟ ಜಾತಿಯವರಿಗೆ ಅತೀ ಹೆಚ್ಚು ಉದ್ಯೋಗ ನೀಡಿ ಮಾದರಿಯಾಗಿದೆ ಎಂದರು. ನಿರ್ದೇಶಕಿ ನಿರ್ಮಲಕೇಶ ಗೌಡ ಅಮೈ ನಿವೃತ್ತರಿಗೆ ಶುಭಕೋರುತ್ತಾ ಅವರ ಕಾರ್ಯವೈಖರಿ ಬಗ್ಗೆ ಕೊಂಡಾಡಿದರು.

ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ  ಚಂದ್ರಶೇಖರ್ ಅಭಿನಂದನೆ ಸಲ್ಲಿಸುತ್ತಾ ಕೇಪು ರವರು ಅನೇಕ ಏಳುಬೀಳುಗಳ ನಡುವೆಯೂ ಓರ್ವ ಪ್ರಾಮಾಣಿಕ ಮತ್ತು ಶ್ರಮಜೀವಿಯಾಗಿ ಕರ್ತವ್ಯ ನಿರ್ವಹಿಸಿ ಬ್ಯಾಂಕಿನ ಸರ್ವತೋಮುಖ ಏಳಿಗೆಯಲ್ಲಿ ಅವರ ಪಾತ್ರವು ಇದೆ ಎಂದು ಸ್ಮರಿಸಿಕೊಂಡರು. ಸನ್ಮಾನಗೊಂಡ  ಕೇಪು ಮಾತನಾಡಿ ಉದ್ಯೋಗ ನೀಡಿದ ಸವಣೂರು ಸೀತಾರಾಮ ರೈಯವರನ್ನು ಸ್ಮರಿಸಿಕೊಂಡು, ಈಗಿನ ಆಡಳಿತ ಮಂಡಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಾಗೂ ಸಿಬ್ಬಂಧಿರ್ಗದ ಕಾರ್ಯವೈಖರಿ ಬಗ್ಗೆ ಅಭಿಮಾನದ ಸಂತಸ ವ್ಯಕ್ತ ಪಡಿಸಿ, ಅನ್ನ ನೀಡಿದ ಸಂಸ್ಥೆಯನ್ನು ಎಂದಿಗೂ ಮರೆಯಲಾರೆ ಎಂದರು.

ಬೆಳಂದೂರು ಪಡಿತರ ಶಾಖೆಯ ಪ್ರಕಾಶ್ ಕೆಡೆಂಜಿ ಪ್ರಾರ್ಥಿಸಿ, ಸಂಘದ ಉಪಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಲಜಾ ಎಚ್ ರೈ ಕಾರ್ಯಕ್ರಮ ನಿರ್ವಹಿಸಿ, ಬೆಳಂದೂರು ಶಾಖೆಯ ಲೇಖಲತಾ ವಂದಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ,  ಕರುಣಾಕರ ಪೂಜಾರಿ ಪಟ್ಟೆ,  ತಿಮ್ಮಪ್ಪ ಗೌಡ ಮುಂಡಾಳ, ನಾರಾಯಣ ಗೌಡ ಪೂವ,  ಚನಿಯಪ್ಪ ನಾಯ್ಕ ಕಾರ್ಲಾಡಿ, ವೇದಾವತಿ ಕೆಡೆಂಜಿ,  ಚೇತನ್ ಕುಮಾರ್ ಕೋಡಿಬೈಲು, ಬೆಳಂದೂರು ಶಾಖಾ ವ್ಯವಸ್ಥಾಪಕರಾದ ಎ ಪಕೀರ, ಮಾಸ್ ನ ಶಾಖಾ ವ್ಯವಸ್ಥಾಪಕರಾದ ಯತೀಶ್ ಪೂಜಾರಿ, ಅನನ್ಯ ಜ್ಯುವೆಲ್ಲರ್‍ಸ್‌ನ  ಪದ್ಮನಾಭ ಆಚಾರ್ಯ, ಸಿಬ್ಬಂದಿಗಳಾದ ಮನೋಜ್.ಎ , ಪೂವಪ್ಪ ಎ, ಗಣೇಶ್ ಎ.ಎನ್, ಪ್ರಕಾಶ್ ಮೋಯ್ಲಿ,  ಪವಿತ್ರ, ಪ್ರಕಾಶ್ ಮಾಲೆತ್ತಾರು, ಜಗದೀಶ್ ಕೆಡೆಂಜಿ, ಪಿಗ್ಮಿ ಸಂಗ್ರಾಹಕರಾದ ಸದಾನಂದ ಆಳ್ವ, ವಿಶ್ವನಾಥ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here