ರಾಮಕುಂಜ ಕುಂಡಾಜೆ ಗುಹೆ ಪ್ರದೇಶಕ್ಕೆ ಎಸ್ಪಿ ಭೇಟಿ, ಪರಿಶೀಲನೆ

0


ರಾಮಕುಂಜ: ಇಲ್ಲಿನ ಕುಂಡಾಜೆ ಸಮೀಪದಲ್ಲಿ ಸರಕಾರಿ ಗೇರುಬೀಜ ತೋಟದಲ್ಲಿರುವ ಪಾಂಡವರ ಗುಹೆ ಎಂದೇ ಸ್ಥಳೀಯವಾಗಿ ಪ್ರಚಲಿತದಲಿರುವ ಗುಹೆಯ ಜಾಗಕ್ಕೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆಯವರು ಮೇ 2ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಗುಹೆಯ ಕುರಿತು ಇದ್ದ ಕುತೂಹಲದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ತಂಡ ಗುಹೆಯ ಸುತ್ತಲೂ ಸ್ವಚ್ಛತೆ ನಡೆಸಿ ಅಧ್ಯಯನ ನಡೆಸಿತ್ತು. ಈ ಗುಹೆ ಅಪರೂಪದ ಬೃಹತ್ ಶಿಲಾಯುಗದ ಸಮಾದಿಯಾಗಿದೆ ಎಂದು ಅಧ್ಯಯನದ ಬಳಿಕ ಪ್ರೊ.ಟಿ.ಮುರುಗೇಶಿಯವರು ಪತ್ರಿಕಾ ಪ್ರಕಟಣೆ ನೀಡಿದ್ದರು.

ಈ ವಿಚಾರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಹಲವು ಊಹಾಪೋಹಗಳಿಗೂ ಸುದ್ದಿಯಾಗಿ ಕುತೂಹಲದಿಂದ ಜನರು ನೋಡಲು ಬರತೊಡಗಿದರು. ಮೇ ೨ರಂದು ಸಂಜೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭವಾನ್ ಸೋನಾವಣೆ, ಕಡಬ ಎಸ್.ಐ. ಆಂಜನೇಯ ರೆಡ್ಡಿ, ಕಡಬ ಠಾಣಾ ತನಿಖಾ ವಿಭಾಗದ ಎಸ್.ಐ. ಶ್ರೀಕಾಂತ್ ರಾಥೋಡ್, ಸಿಬ್ಬಂದಿಗಳಾಧ ಭವಿತ್ ರೈ, ವಿಠಲ್‌ರವರು ಗುಹೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಾದ ಸದಾಶಿವ ಶೆಟ್ಟಿ ಮಾರಂಗ, ಸುರೇಶ್ ಕುಂಟುಪುಣಿಗುತ್ತು, ನಿಶ್ಚಿತ್ ಶಾರದಾನಗರರವರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here