ಚೆಲ್ಯಡ್ಕ: ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕೋತ್ಸವ, ಪಾವಂಜೆ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ

0

ಬೆಟ್ಟಂಪಾಡಿ: ಚೆಲ್ಯಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 7 ನೇ ವರ್ಷದ ಪ್ರತಿಷ್ಠಾ ದಿನಾಚರಣೆ ಮತ್ತು ‘ಸನ್ನಿಧಿ’ ನಿಲಯದ ವಾರ್ಷಿಕೋತ್ಸವದ ಅಂಗವಾಗಿ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಶುಭಾಶೀರ್ವಾದಗಳೊಂದಿಗೆ ಭಜನಾ ಸೇವೆ, ಮಹಾಪೂಜೆ ಹಾಗೂ ಸಂಜೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಪುಣ್ಯ ಕಥಾನಕದ ಯಕ್ಷಗಾನ ಬಯಲಾಟ ಮೇ 2 ರಂದು ನಡೆಯಿತು.

 

ಬೆಳಿಗ್ಗೆ ‘ಸನ್ನಿಧಿ’ ಮನೆಯಲ್ಲಿ ಗಣಪತಿ ಹೋಮ, ಭಜನೆ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಸೇವೆ ನಡೆದು ಚೌಕಿಪೂಜೆ, ಪ್ರಸಾದ ವಿತರಣೆಯಾಗಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಇದೇ ವೇಳೆ ಪಾವಂಜೆ ಮೇಳದ ಸಂಚಾಲಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ನಿಧಿ ನಿಲಯದ‌ ಮನೆಯವರು ಸನ್ಮಾನಿಸಿ ಗೌರವಿಸಿದರು.

 

LEAVE A REPLY

Please enter your comment!
Please enter your name here