ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ

0

ಕಡಬ: ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಏ.30ರಿಂದ ಮೇ.2ರವರೆಗೆ ನಡೆಯಿತು.

ಏ.30ರಂದು ಸಂಜೆ ಶ್ರೀ ಉಳ್ಳಾಕ್ಲು ಮತ್ತು ಮುದ್ದೇರ್‍ಲಾಯ ಭಂಡಾರ ಹಿಡಿದು ರಾತ್ರಿ ನೇಮೋತ್ಸವ ನಡೆಯಿತು. ಮೇ.1ರಂದು ಬೆಳಿಗ್ಗೆ ಅಲ್ನಾತ್ತಾಯ ದೈವದ ಮತ್ತು ಹುಲಿಭೂತ ದೈವದ ಭಂಡಾರ ಹಿಡಿದು ಅದೇ ದಿನ ಸಂಜೆ ನೇಮೋತ್ಸವ, ಬಳಿಕ ದೆಯ್ಯರೆ ನೇಮ, ರಾತ್ರಿ ಅಲ್ನಾತ್ತಾಯ ನೇಮ ನಡೆಯಿತು. ಮೇ.2ರಂದು ಬೆಳಿಗ್ಗೆ ಹುಲಿಭೂತ ಹಾಗೂ ರುದ್ರಾಂಡಿ ದೈವದ ನೇಮ ನಡೆಯಿತು. ಮಧ್ಯಾಹ್ನ ಧ್ವಜ ಇಳಿಸಲಾಯಿತು. ರಾತ್ರಿ ಶಿರಾಡಿ ದೈವದ ಭಂಡಾರ ಹಿಡಿದು ನೇಮ ನಡೆಯಿತು.

ನೇಮೋತ್ಸವದಲ್ಲಿ ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಪ್ರಧಾನ ಪೂಜಾರಿ ರಘುಚಂದ್ರ ಗೌಡ ಪೂಜಾರಿಮನೆ, ದೈವದ ನಾಲ್ವೇಕಿಯವರಾದ ಚಂದ್ರಶೇಖರ ಗೌಡ ಬ್ರಂತೋಡು, ಸುಂದರ ಗೌಡ ದೊಡ್ಡ ಮನೆ, ಉಮೇಶ್ ಗೌಡ ಕಲ್ಲೂರು, ಕುಶಾಲಪ್ಪ ಗೌಡ ಆಯರ್ತಮನೆ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಬ್ರಂತೋಡು, ರಘುಚಂದ್ರ ಮನೆಜಾಲು, ರಘುಚಂದ್ರ ಪೂಜಾರಿ ಮನೆ, ಹರೀಶ ಕಲ್ಲೂರು, ಮಹಾಲಿಂಗ ಕನಿಯ, ಶಿವರಾಮ ನಾಯ್ಕ, ರಾಮಣ್ಣ ಆಚಾರಿ, ನಾಗವೇಣಿ, ಹೇಮಾವತಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here