ಗೌಡ ವಿದ್ಯಾಸಂಘದ ಪ್ರಾಯೋಜಕತ್ವದ ಮಹಾಲಿಂಗೇಶ್ವರ ಐಟಿಐ ಸಂಸ್ಥೆಯ ನಿರ್ಮಾಣದ ಸಭಾಭವನಕ್ಕೆ ಅಬುದಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈರವರಿಂದ ರೂ. 51ಸಾವಿರ ದೇಣಿಗೆ

0

 

ಪುತ್ತೂರು: ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಪ್ರಾಯೋಜಕತ್ವದ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸಭಾಭವನಕ್ಕೆ ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ಮಿತ್ರಂಪಾಡಿ ಜಯರಾಮ ರೈ ಅವರು ರೂ. 51ಸಾವಿರವನ್ನು ದೇಣಿಗೆಯಾಗಿ ನೀಡಿದರು.ಮೇ 3ರಂದು ಮಿತ್ರಂಪಾಡಿ ಜಯರಾಮ ರೈ ಅವರು ಶ್ರೀ ಮಹಾಲಿಂಗೇಶ್ವರ ಐಟಿಐ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯಲ್ಲಿನ ಶಿಕ್ಷಣದ ವಿಚಾರಗಳ ಮಾಹಿತಿ ಪಡೆದ ಅವರು ಎಲ್ಲಾ ಸಮಾಜದವರಿಗೆ ಸಮಾನವಾಗಿ ಶಿಕ್ಷಣ ನೀಡುತ್ತಿರುವ ಶ್ರೀ ಮಹಾಲಿಂಗೇಶ್ವರ ಐಟಿಐ ಕಾರ್ಯವೈಖರಿಯ ಕುರಿತು ಶ್ಲಾಘೀಸಿದರು. ಇದೇ ಸಂದರ್ಭದಲ್ಲಿ ಅವರು ರೂ. 51ಸಾವಿರವನ್ನು ಸಂಸ್ಥೆಯ ನೂತನ ಸಭಾಭವನದ ನಿರ್ಮಾಣದ ಕಾರ್ಯಕ್ಕೆಂದು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಯು.ಪಿ.ರಾಮಕೃಷ್ಣ, ನಿರ್ದೇಶಕ ಚಿದಾನಂದ ಬೈಲಾಡಿ, ಪ್ರಾಂಶುಪಾಲ ಪ್ರಕಾಶ್. ಪೈ, ಸಂಪರ್ಕಾಧಿಕಾರಿ ಉಮೇಶ್ ಯಂ, ಉದ್ಯಮಿ ಜಯಕುಮಾರ ರೈ ಮಿತ್ರ೦ಪಾಡಿ, ಶ್ರೀಧರ ಗೌಡ ಕಣಜಾಲು, ಸಂಸ್ಥೆಯ ಸಿಬ್ಬಂದಿಗಳಾದ ಸುಲೋಚನ, ರಾಧಾಕೃಷ್ಣ, ಪ್ರಕಾಶ, ಜಯರಾಮ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here