ಸಮುದಾಯದ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೊಗುತ್ತಿರುವುದು ಆತಂಕಕಾರಿ ಬೆಳವಣಿಗೆ: ಜಲೀಲ್ ಸಖಾಫಿ ಜಾಲ್ಸೂರು

0

ಪುತ್ತೂರು- ಪಾಶ್ಚಾತ್ಯ ವಿದೇಶಿ ಸಂಸ್ಕಾರವನ್ನು ನಮ್ಮ  ಸಮುದಯದ ಕೆಲವು ಯುವಕರು ಅನುಸರಿಸುತಿದ್ದು. ಅದು ಆತಂಕಕಾರಿ ಬೆಳವಣಿಗೆ ಎಂದು ಅರಿಯಡ್ಕ ಜುಮಾ ಮಸೀದಿಯ ಖತೀಬ್ ಜಲೀಲ್ ಸಖಾಫಿ ಜಲ್ಸೂರು ಹೇಳಿದರು.
ಅವರು ಅರಿಯಡ್ಕ ಜುಮಾ ಮಸೀದಿಯಲ್ಲಿ ನಡೆದ ಈದ್ ಸಂದೇಶ ಬಾಷಣದಲ್ಲಿ ಮಾತನಾಡುತ್ತಾ. ಯುವ ಸಮುದಾಯಕ್ಕೆ ಬಹಳಷ್ವು ಜವಾಬ್ದಾರಿಗಳಿದ್ದು. ಯುವ ಸಮುಹವು ದಾರ್ಮಿಕ ಆಚಾರ ವಿಚಾರಗಳನ್ನು ಮೈಗೂಡಿಗೊಳ್ಳಬೇಕಾಗಿದೆ.ಸಮುದಾಯದಲ್ಲಿ ಬಡತನ ಹೆಚ್ಚಾಗಿದ್ದು ಬಡತನ ನಿರ್ಮೂಲನೆ ಮುಸ್ಲಿಂ ಸಮುದಾಯ ಯುವಕರ ಜವಾಬ್ಬಾರಿಯಾಗಿದೆ. ಶಾಂತಿ ಸಾಮರಸ್ಯ ಐಕ್ಯತೆ ಮತ್ತು ಸೌಹರ್ದಯುತ ದೇಶ ಕಟ್ಟವಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಬೇಕಾಗಿದೆ.
ಈದ್ ಹಬ್ಬವು ಸಾಮರಸ್ಯ ಮತ್ತು ಸಹೋದರತ್ವಕ್ಕೆ ಸಾಕ್ಷಿಯಾಗಲಿ ಎಂದರು. ಈ ಸಂದರ್ಭದಲ್ಲಿ ಜಮಾಹತ್ ಅಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಕಾರ್ಯದರ್ಸಿ ಅಬ್ಬಾಸ್ ಹಾಜಿ ಉಪಾಧ್ಯಕ್ಷರಾದ ಇಬ್ರಾಹಿಂ ಎ ಆರ್ ಕಾರ್ಯದರ್ಶಿ ಜಾಬಿರ್ ಅರಿಯಡ್ಕ ಸದರ್ ಮುಹಲ್ಲಿಂ ಅಬ್ದುಲ್ ಕರೀಂ ಬಹಸನಿ ಮುಹಲ್ಲಿಂ ಅಬೂಬಕ್ಕರ್ ಮುಸ್ಲಿಯಾರ್ ಹಾಗು ಜಮಾಹತಿನ ಹಲವಾರು ಮಂದಿ  ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here