ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕೆಳಗಡೆ ದ್ವಿಚಕ್ರ ವಾಹನಗಳ ಸೂಕ್ತ ಭದ್ರತೆಗೆ ಸಿ.ಸಿ ಕ್ಯಾಮರಾ ಅಳವಡಿಸುವಂತೆ ಮನವಿ

0

ಕಾಣಿಯೂರು: ಪುತ್ತೂರು ಕೆ.ಎಸ್.ಆರ್‌ಟಿ.ಸಿ ಬಸ್ ನಿಲ್ದಾಣದ ಕೆಳಗಡೆ ದ್ವಿಚಕ್ರ ವಾಹನಗಳಿಗೆ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಸಿಸಿ ಕ್ಯಾಮರ ಅಳವಡಿಸುವಂತೆ ಪುತ್ತೂರು ಕೆ.ಎಸ್.ಆರ್‌ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಕಾಣಿಯೂರು ಗ್ರಾಮದ ಓಡಬಾಯಿ ಹರೀಶ್ ಎಂಬವರು ಮನವಿ ಮಾಡಿದ್ದಾರೆ. ಪುತ್ತೂರು ಕೆ.ಎಸ್.ಆರ್‌ಟಿ.ಸಿ ಬಸ್ ನಿಲ್ದಾಣದ ಕೆಳಗಡೆ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿದ್ದು, ಹಾಗೂ ನಿಲುಗಡೆಗೊಳಿಸಿದ ದ್ವೀಚಕ್ರಗಳಿಗೆ ನಿಲುಗಡೆ ವೆಚ್ಚವನ್ನು ಪಾವತಿಸಲಾಗುತ್ತಿದೆ.

ಇಲ್ಲಿ ಪ್ರತಿನಿತ್ಯವೂ ದೂರದೂರಿಗೆ ಬಸ್ ಪ್ರಯಾಣ ಬೆಳೆಸುವ ಉದ್ದೇಶದಿಂದ ಪುರುಷರು, ಮಹಿಳೆಯರು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಹಲವಾರು ದ್ವಿಚಕ್ರ ವಾಹನಗಳು ಸ್ವಳವಕಾಶ ಇಲ್ಲದಷ್ಟು ಪ್ರತಿದಿನವೂ ನಿಲುಗಡೆಗೊಳ್ಳುತ್ತಿದೆ. ಆದರೆ ತಾವು ಪಾವತಿಸಿರುವ ಹಣಕ್ಕೆ ಪ್ರತಿಯಾಗಿ ತಮ್ಮ ವಾಹನಗಳಿಗೆ ಯಾವುದೇ ಭದ್ರತಾ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಮಾರ್ಚ್ 31 ರಂದು ನನ್ನ ದ್ವಿಚಕ್ರ ವಾಹನವನ್ನು ಬೆಳಿಗ್ಗೆ ಕೆ.ಎಸ್.ಆರ್‌ಟಿ.ಸಿ ಬಸ್ ನಿಲ್ದಾಣದ ಕೆಳಗಡೆ ನಿಲುಗಡೆ ಮಾಡಿ, ದುಬಾರಿ ವೆಚ್ಚದ ಹೆಲ್ಮೆಟನ್ನು ಬೈಕ್ ಮೇಲೆ ಇಟ್ಟು ಉದ್ಯೋಗದ ನಿಮಿತ್ತ ಮಂಗಳೂರಿಗೆ ಹೋಗಿದ್ದು, ಸಂಜೆ ಹಿಂದುರುಗಿ ಬರುವಾಗ ಹೆಲ್ಮೆಟ್ ಕಳವಾಗಿರುತ್ತದೆ.

ಅಲ್ಲದೇ ಈ ಮೊದಲು ದ್ವಿಚಕ್ರ ವಾಹನಕ್ಕೆ ಹಲವಾರು ರೀತಿಯ ಹಾನಿಯನ್ನು ಮಾಡಿರುತ್ತಾರೆ. ಈ ಬಗ್ಗೆ ನಿಲುಗಡೆ ಸ್ಥಳದಲ್ಲಿ ನೇಮಿಸಿರುವ ಸಿಬ್ಬಂದಿಗಳ ಜೊತೆ ವಿಚಾರಿಸಿದಾಗ ಬೇಜಾವಬ್ದಾರಿಯಿಂದ ವರ್ತಿಸಿದ್ದು, ಏನು ಬೇಕಾದರು ಮಾಡಿಕೊಳ್ಳಿ, ನೀವು ಯಾರಿಗೆ ಬೇಕಾದರು ದೂರು ನೀಡಿ ಅದು ನಮಗೆ ಗೊತ್ತಿಲ್ಲ ಹಾಗೂ ನಿಮ್ಮ ದ್ವಿಚಕ್ರ, ಹೆಲ್ಮೆಟ್ ಹಾಗೂ ಅದರ ಇತರ ವಾಹನದ ಭಾಗಗಳಿಗೆ ನೀವೇ ಜವಾಬ್ದಾರರು ಎಂದು ನಿಲುಗಡೆ ಪಾವತಿ ರಸೀದಿಯಲ್ಲಿ ಈ ಮೊದಲೇ ತಿಳಿಸಲಾಗಿದೆ ಎಂದು ಬೇಜಾವಬ್ದಾರಿಯಿಂದ ಉತ್ತರವನ್ನು ಕೊಟ್ಟಿರುತ್ತಾರೆ.

ಇದು ನನ್ನ ಒಬ್ಬನಿಗೆ ಆಗಿರುವ ಸಮಸ್ಯೆಯಾಗಿರುವುದಿಲ್ಲ ಇಂತಹ ಬೇರೆ ಬೇರೆ ರೀತಿಯಿಂದ ಹಲವಾರು ಘಟನೆಗಳು ನಡೆದಿರುತ್ತದೆ ಆದರೆ ಯಾರೂ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ಸಿಸಿ ಕ್ಯಾಮರದ ಮೂಲಕ ತಮಗಾಗಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳೋಣವೆಂದರೆ ಇಲ್ಲಿ ಯಾವುದೇ ಸಿ.ಸಿ ಕ್ಯಾಮರಾವನ್ನು ಅಳವಡಿಸಿರುವುದಿಲ್ಲ. ಇಲ್ಲಿ ಪುರುಷರಲ್ಲದೇ ಮಹಿಳೆಯರು ವಾಹನ ನಿಲುಗಡೆ ಮಾಡುತ್ತಿರುವುದರಿಂದ ಅವರು ರಾತ್ರಿ ಒಬ್ಬೊಬ್ಬರಾಗಿ ಬಂದು ತಮ್ಮ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದು, ಈ ಸಂದರ್ಭದಲ್ಲಿ ಎಲ್ಲಿಯಾದರೂ ಅಹಿತಕರ ಘಟನೆಗಳು ನಡೆದರೆ ಹೊಣೆ ಯಾರು.

ನಿಲುಗಡೆ ಸ್ಥಳದಲದ್ಲಿರುವ ಸಿಬ್ಬಂದಿಗಳು ಮೊಬೈಲ್ ಫೋನಲ್ಲೆ ಬ್ಯುಸಿಯಾಗಿರುವುದರಿಂದ ನಂತರ ಏನೇ ಘಟನೆಯಾದರೂ ನಾವು ಹೊಣೆಯಲ್ಲ ಎಂಬ ಸಬೂಬ್ ಉತ್ತರ ನೀಡುತ್ತಾರೆ. ಅಲ್ಲದೇ ಈ ನಿಲುಗಡೆ ಸ್ಥಳದಲ್ಲಿ ಮಧ್ಯದ ಬಾಟಲಿಗಳು ಹಾಗೂ ಇನ್ನಿತರ ವಸ್ತುಗಳು ಅಲ್ಲಲ್ಲಿ ಬಿದ್ದಿರುತ್ತದೆ ಎಂದು ಮನವಿಯಲ್ಲಿ ತಿಳಿಸಿರುವ ಹರೀಶ್‌ರವರು ಇಲ್ಲಿ ಪ್ರತಿನಿತ್ಯವೂ ಸ್ಥಳವಕಾಶವಿಲ್ಲದಷ್ಟು ಹಲವಾರು ದ್ವಿಚಕ್ರ ವಾಹನಗಳು ನಿಲುಗಡೆ ಮಾಡುತ್ತಿದ್ದು, ಅದಕ್ಕೆ ಪ್ರತಿಯಾಗಿ ಹಣ ಪಾವತಿಸಲಾಗುತ್ತಿದೆ. ಹಾಗಾಗಿ ಈ ನಿಲುಗಡೆ ಸ್ಥಳದಲ್ಲಿ ಮುಂದೆ ಬೇರೆ ಯಾವುದೇ ರೀತಿಯ ಅಹಿತರ ಘಟನೆಗಳುನಡೆಯದಂತೆ ಸೂಕ್ತ ತನಿಖೆ ನಡೆಸಿ, ಸಿ.ಸಿ ಕ್ಯಾಮರವನ್ನು ಅಳವಡಿಸುವಂತೆ ಒತ್ತಾಯಿಸಿದ್ದಾರೆ. ಮನವಿಯನ್ನು ಮನವಿ ಪ್ರತಿಯನ್ನು ಪುತ್ತೂರು ನಗರ ಸಭೆ ಸಹಿತ ಸಂಬಂಧಪಟ್ಟ ಇಲಾಖೆಗಳಿಗೆ ನೀಡಿದ್ದಾರೆ.

ಪುತ್ತೂರು ಕೆ.ಎಸ್.ಆರ್‌ಟಿ.ಸಿ ಬಸ್ ನಿಲ್ದಾಣದ ಕೆಳಗಡೆ ದ್ವಿಚಕ್ರ ವಾಹನಗಳಿಗೆ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಸಿ.ಸಿ ಕ್ಯಾಮರ ಅಳವಡಿಸುವಂತೆ ಕ್ರಮಕೈಗೊಳ್ಳಲು ಪುತ್ತೂರು ಕೆ.ಎಸ್.ಆರ್‌ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಮತ್ತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇನೆ. ತನಗಾಗಿರುವ ಸಮಸ್ಯೆಗಳು ಇನ್ಯಾರಿಗೂ ಆಗಬಾರದು ಎಂಬ ದೃಷ್ಠಿಯಿಂದ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ. ಮನವಿಗೆ ಪೂರಕವಾಗಿ ಸಿ.ಸಿ ಕ್ಯಾಮರಾ ಅಳವಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಪುತ್ತೂರು ಕೆ.ಎಸ್.ಆರ್‌ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರಿಂದ ಹಿಂಬರಹ ಬಂದಿರುತ್ತದೆ – ಹರೀಶ್ ಓಡಬಾಯಿ, ಕಾಣಿಯೂರು

LEAVE A REPLY

Please enter your comment!
Please enter your name here