ಪುತ್ತೂರು: ಮಾಡನ್ನೂರು ಮಸೀದಿಯಲ್ಲಿ ಈದುಲ್ ಫಿತರ್ ಆಚರಿಸಲಾಯಿತು. ಸ್ಥಳೀಯ ಖತೀಬ್ ಸಿರಾಜುದ್ದೀನ್ ಫೈಝಿ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ನಮಾಜ್ ನಡೆಯಿತು. ಮಾಡನ್ನೂರು ಮಸೀದಿಯ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ ಹಾಗೂ ನೂರುಲ್ ಹುದಾದ ಅಧ್ಯಕ್ಷ ಅಬ್ದುಲ್ ಅಝೀಝ್ ಶುಭ ಹಾರೈಸಿದರು. ಮಾಡನ್ನೂರು ಮೊಹಲ್ಲಾ ವ್ಯಾಪ್ತಿಯ ಕಾವು, ಅರೆಯಲಾಡಿ ಮಸೀದಿಯವರು, ಜಮಾಅತರು ಭಾಗವಹಿಸಿದ್ದರು.