ಕರೆಮನೆಕಟ್ಟೆ ಕೊಡಿನೀರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

0

  • ಅಧ್ಯಕ್ಷೆ ಪುಷ್ಪಾ ಮೋಹನ ನಾಯ್ಕ, ಉಪಾಧ್ಯಕ್ಷ ವಿಶ್ವನಾಥ ಗೌಡ ಕರಮನೆ

ಪುತ್ತೂರು; ಮುಂಡೂರು ಗ್ರಾಮದ ಕರೆಮನೆಕಟ್ಟೆ ಕೊಡಿನೀರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪುಷ್ಪಾ ಮೋಹನ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ ಕರಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

 

ಸಂಘದ ಕಚೇರಿಯಲ್ಲಿ ಮೇ.4ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪುಷ್ಪಾರವರನ್ನು ಶಿವಮ್ಮ ಸೂಚಿಸಿ, ವಿಜಯ ಕುಮಾರ್ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಿಶ್ವನಾಥ ಗೌಡರನ್ನು ವಸಂತ ಪೂಜಾರಿ ಸೂಚಿಸಿ, ಆನಂದ ಸಾಲಿಯಾನ್ ಅನುಮೋದಿಸಿದರು. ನಿರ್ದೇಶಕರಾದ ಸುದರ್ಶನ್, ವೇದಾವತಿ, ಸೀತಾರಾಮ, ಬಿ.ಎಸ್ ಸುಬ್ರಾಯ, ಮಲ್ಲಿಕಾ ಜಯರಾಮ್ ಹಾಗೂ ಕೆ.ಚೋಮ ನಾಯ್ಕ ಉಪಸ್ಥಿತರಿದ್ದರು.

 

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ನಡುಬೈಲು, ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಬೂತ್ ಕಾರ್ಯದರ್ಶಿ ಜನಾರ್ದನ , ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಅನಿಲ್ ಕನ್ನರ್ ನೂಜಿ, ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ಜಯಂತಿ ರೈ, ಎಪಿಎಂಸಿ ಮಾಜಿ ಸದಸ್ಯ ಸುಂದರ ನಾಯ್ಕ, ಧನಂಜಯ, ಪ್ರಸಾದ್ ಬರಕೋಲಾಡಿ, ಪ್ರಸಾದ್ ನೇರಳಕಟ್ಟೆ, ರಾಮಣ್ಣ ನಾಯ್ಕ ಕಲ್ಲಮ, ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸುಂದರ ಗೌಡ ನಡುಬೈಲು ಮೊದಲಾದವರು ಉಪಸ್ಥಿತರಿದ್ದು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here