ನಿಡ್ಪಳ್ಳಿ; ದ.ಕ.ಜಿ.ಪಂ.ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಾನಕಿ.ಕೆ ಇವರು ಪದೋನ್ನತಿ ಹೊಂದಿ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆ ಗೊಂಡು ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇಲ್ಲಿಗೆ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದಾರೆ.
ಇವರು ಕಳೆದ 26 ವರ್ಷ ಸಹಶಿಕ್ಷಕಿಯಾಗಿ, 2 ವರ್ಷ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಪಾಣಾಜೆ ಶಾಲೆಯಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು.ಇವರು ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಾವು ಇಲ್ಲಿಯ ಪದವಿಯೇತರ ಮುಖ್ಯ ಗುರು ಹುಕ್ರಪ್ಪ ನಾಯ್ಕ.ಬಿ ಇವರ ಪತ್ನಿ.