ಮೂಲ್ಕಿ ಸುಂದರರಾಮ್ ಶೆಟ್ಟಿರವರ 107ನೇ ಜನ್ಮದಿನಾಚರಣೆ

0

  • ಪುತ್ತೂರಿನ ಅಗರಿ ನವೀನ್ ಭಂಡಾರಿ ಸಹಿತ ನೂರಾರು ಮಂದಿ ಭಾಗವಹಿಸುವಿಕೆ


ಪುತ್ತೂರು: ವಿಜಯಾ ಬ್ಯಾಂಕ್‌ನ ಸ್ಥಾಪಕರಾದ ಮೂಲ್ಕಿ ಸುಂದರರಾಮ್ ಶೆಟ್ಟಿರವರ 107 ನೇ ಜನ್ಮದಿನಾಚರಣೆಯು ಬೆಂಗಳೂರಿನ ಬೊಮ್ಮನಹಳ್ಳಿಯ ಸುಂದರರಾಮ್ ಶೆಟ್ಟಿ ಸಭಾಂಗಣದಲ್ಲಿ ಎ. 30 ರಂದು ಆಚರಿಸಲಾಯಿತು. ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ .ವಿಶ್ವನಾಥ ಶೆಟ್ಟಿ, ವಿಜಯಾ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ.ಸದಾನಂದ ಶೆಟ್ಟಿರವರುಗಳು ಮೂಲ್ಕಿ ಸುಂದರರಾಮ್ ಶೆಟ್ಟಿರವರ ಸಮಾಜಸೇವೆ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದರು. ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹರ್ದ ಕ್ರೆಡಿಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್‍ಯಕ್ರಮದ ಸಂಘಟಕರಲ್ಲಿ ಒರ್ವರಾದ ಪುತ್ತೂರಿನ ಅಗರಿ ನವೀನ್ ಭಂಡಾರಿ ಸಹಿತ ನೂರಾರು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here