ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಅಂಗನವಾಡಿ ಕೇಂದ್ರಕ್ಕೆ ಕುಂಬ್ರ ದಿ.ಬಾಲಕೃಷ್ಣ ರೈ (ಪಟ್ಲೇರ್) ಅವರ ಪುತ್ರ ಸಂತೋಷ್ ರೈ ಕುಂಬ್ರ ಮತ್ತು ಸುಜಾತ ಎಸ್.ರೈಯವರು ತಮ್ಮ ಮಗಳು ಹಂಸಿಕಾರವರ 2ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿಗಾಗಿ ಫ್ಯಾನ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈಯವರಿಗೆ ಕೊಡುಗೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂತೋಷ್ ರೈಯವರ ಪುತ್ರ ಲಕ್ಷಯ್ ರೈ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮಾಲತಿ ಜೆ.ರೈ, ಎಸ್.ಮಾಧವ ರೈ ಕುಂಬ್ರ, ಶಶಿಕಲಾ ಡಿ, ರಾಜೀವಿ ಕೆ, ಸುಜಾತ, ರೇಣುಕಾ ಉಪಸ್ಥಿತರಿದ್ದರು.