ಕುಂಬ್ರ ಜನ್ಮ ಕಾಂಪ್ಲೆಕ್ಸ್‌ನಲ್ಲಿ ಎಸ್.ಎಸ್.ಟ್ರೇಡರ್‍ಸ್ ಶುಭಾರಂಭ

0

  • ಕೊಕ್ಕೊ, ರಬ್ಬರ್,ಕಾಡುತ್ಪತ್ತಿ ಖರೀದಿ, ರಬ್ಬರ್ ಕೃಷಿ ಸಲಕರಣೆ ಮಾರಾಟ ಮಳಿಗೆ

ಪುತ್ತೂರು: ರಬ್ಬರ್, ಕೊಕ್ಕೋ ಸೇರಿದಂತೆ ಕಾಡುತ್ಪತ್ತಿಗಳ ಖರೀದಿ ಮತ್ತು ರಬ್ಬರ್ ಕೃಷಿ ಸಲಕರಣೆಗಳ ಮಾರಾಟ ಮಳಿಗೆ ಎಸ್.ಎಸ್.ಟ್ರೇಡರ್‍ಸ್ ಮೇ.5 ರಂದು ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿರುವ ಜನ್ಮ ಪೆಟ್ರೋಲ್ ಬಂಕ್ ಹತ್ತಿರವಿರುವ ಜನ್ಮ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಗಣಪತಿ ಹೋಮದೊಂದಿಗೆ ಮಳಿಗೆ ಶುಭಾರಂಭಗೊಂಡಿತು. ಅರ್ಚಕ ರವಿರಾಮ ಭಟ್ ಮತ್ತು ಸತ್ಯನಾರಾಯಣ ಭಟ್‌ರವರು ಗಣಪತಿಹೋಮ ನಡೆಸಿಕೊಟ್ಟರು.

 


ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ನಟ,ನಿರ್ದೇಶಕ ಸುಂದರ ರೈ ಮಂದಾರ, ಉದ್ಯಮಿ ಅಜಿತ್ ಶೆಟ್ಟಿ ಮೇರ್ಲ, ಮೋಹನ್ ಆಳ್ವ ಮುಂಡಾಳಗುತ್ತು, ಸಂದೀಪ್ ಶೆಟ್ಟಿ ಅರಿಯಡ್ಕ, ಶಬರಿ ಜಗನ್ನಾಥ ರೈ ಕೊಂರ್ಬಡ್ಕಬೀಡು, ವಿಶ್ವನಾಥ ರೈ, ಆನಂದ ರೈ ಡಿಂಬ್ರಿ, ಅರುಣ್ ರೈ ಆರ್ಲಪದವು, ಸತೀಶ್ ಎಚ್.ಕೆ ಎಂಡೆಸಾಗು, ಸಿರಿ ಚಿಕನ್ ಸೆಂಟರ್‌ನ ಉದಯ ರೈ, ಕೃಷ್ಣ, ಶುಭಕರ ರೈ, ಅಶೋಕ್ ರೈ ದೇರ್ಲ, ಭಾಸ್ಕರ ರೈ ಸೇರಿದಂತೆ ನೂರಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕರುಗಳಾದ ಶರತ್‌ಚಂದ್ರ ಭಂಡಾರಿ ಮತ್ತು ಚಿರಾಗ್ ರೈ ಬೆದ್ರುಮಾರುರವರು ಅತಿಥಿಗಳನ್ನು, ಗ್ರಾಹಕರನ್ನು ಸ್ವಾಗತಿಸಿ ಸತ್ಕರಿಸಿ ಸಹಕಾರ ಕೋರಿದರು.

ಕಾಡುತ್ಪತ್ತಿ ಖರೀದಿ, ಕೃಷಿ ಸಲಕರಣೆ ಮಾರಾಟ
ಎಸ್.ಎಸ್.ಟ್ರೇಡರ್‍ಸ್‌ನಲ್ಲಿ ಎಲ್ಲಾ ಬಗೆಯ ಕಾಡುತ್ಪತ್ತಿಗಳ ಖರೀದಿಯೊಂದಿಗೆ ರಬ್ಬರ್ ಕೃಷಿ ಸಲಕರಣೆಗಳ ಮಾರಾಟ ವ್ಯವಸ್ಥೆಯೂ ಇದೆ. ರೈತ ಬಾಂಧವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಡುತ್ಪತ್ತಿಗಳನ್ನು ಖರೀದಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಹಕರು ಪ್ರೋತ್ಸಾಹ ನೀಡುವಂತೆ ಮಾಲಕರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9632727289, 9663838811 ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here