ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ರಂಗಮಂದಿರ ಕಾಮಗಾರಿಗೆ ಚಾಲನೆ

0

  • ಕಾವು ಹೇಮನಾಥ ಶೆಟ್ಟಿ ಮತ್ತು ಮಿತ್ರಂಪಾಡಿ ಜಯರಾಂ ರೈ ಯವರಿಗೆ ಸನ್ಮಾನ

 

ಪುತ್ತೂರು: ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆದು , ಬ್ರಹ್ಮಕಲಶೋತ್ಸವದಲ್ಲಿ ೧೨.೫ ಲಕ್ಷ ಉಳಿಕೆಯಾಗಿದ್ದು ಈ ಮೊತ್ತದಲ್ಲಿ ದೇವಳದ ವಠಾರದಲ್ಲಿ ರಂಗಮಂದಿರ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು ಅದರ ಕಾಮಗಾರಿಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮತ್ತು ಉದ್ಯಮಿ ಅಬುದಾಬಿ ಜಯರಾಮ ರೈ ಮಿತ್ರಂಪಾಡಿಯವರು ಚಾಲನೆ ನೀಡಿದರು.

 


ಯಶಸ್ವಿ ಬ್ರಹ್ಮಕಲಶೋತ್ಸವ ನಡೆದು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹಾಗೂ ಮಿತ್ರಂಪಾಡಿ ಜಯರಾಮ ರೈ ಯವರಿಗೆ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕುಡ್ಕಾಡಿ ಶೀನಪ್ಪ ರೈ ಕೊಡೆಂಕಿರಿ ಮತ್ತು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ಪದ್ಮವತಿ ಶೀನಪ್ಪ ರೈ ಯವರ ಮನೆಯಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಡಮಜಲು ಸುಭಾಸ್ ರೈಗಳ ಪ್ರಸ್ಥಾವನೆಯೊಂದಿಗೆ ಆಲಡ್ಕಶ್ರೀ ಸದಾಶಿವ ದೇವಸ್ಥಾನ ದ ಯಶಸ್ವೀ ಭ್ರಹ್ಮಕಲಶೋತ್ಸವ ವನ್ನು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ದಾನಿ, ಮಿತ್ರಂಪಾಡಿ ಜಯರಾಮ ರೈಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಸಮಾಜಕ್ಕಾಗಿ ಉತ್ತಮ ಸೇವೆ ನೀಡಿತ್ತಿರುವ ಬಗ್ಗೆ ತಿಳಿಸಿದರು.ಬ್ರಹ್ಮಕಲಶೋತ್ಸವದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಯವರು ಮಾತನಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಉತ್ತಮ ಜವಾಬ್ದಾರಿಯನ್ನು ರಾಜಕೀಯ ರಹಿತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿ ಮುನ್ನಡೆಸಿದ್ದು ಮನಸ್ಸಿಗೆ ತೃಪ್ತಿ ತಂದಿದೆ ಹಾಗೂ ಸುಮಾರು ೧೨.೫ಲಕ್ಷ ರೂಪಾಯಿ ಉಳಿಕೆಯೊಂದಿಗೆ ಯಶಸ್ವಿಯಾಗಿ ಎಲ್ಲರ ಪ್ರೀತಿಗೆ ಪಾತ್ರನಾದದ್ದು ಸಂತೋಷದ ವಿಷಯವಾಗಿದೆ ಎಂದರು. ಉದ್ಯಮಿ ಅಬುದಾಬಿ ಜಯರಾಮ ರೈಗಳು ಮಾತನಾಡಿ ನಾನು ವಿದೇಶದಲ್ಲಿ ಉದ್ಯಮಿಯಾಗಿದ್ದರೂ ನನ್ನ ಊರಿನ ಊರಿನ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸಿಕೊಂಡು ಯಾವುದೇ ಸಾಮಾಜಿಕ ಕೆಲಸ ಕಾರ್ಯಗಳಿಗೆ ನನ್ನಿಂದಾಗುವ ಎಲ್ಲಾ ಸಹಾಯವನ್ನು ನೀಡುತ್ತೇನೆ, ನನ್ನ ಬಂಧುಗಳಿಗೆ ಮತ್ತು ಹುಟ್ಟೂರಿಗೆ ನೀಡಿದ ಸೇವೆ ತೃಪ್ತಿಯನ್ನು ತಂದಿದೆ ಎಂದರು. ಕಾರ್ಯಕ್ರಮದಲ್ಲಿ, ಕುಟುಂಬದ ಯಜಮಾನ ದೇರ್ಲ ಕೊರಗಪ್ಪ ರೈ, ತಿಂಗಳಾಡಿ ರಾಮಯ್ಯ ರೈ, ಎಂ ಆರ್ ಜಯ ಕುಮಾರ್ ರೈ ಮಿತ್ರಂಪಾಡಿ, ಹರ್ಷ ಕುಮಾರ್ ರೈ ಮಾಡಾವು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೋಳೋಡಿಗುತ್ತು ಅರುಣ್ ಕುಮಾರ್ ಆಳ್ವ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗುತ್ತು ಭಾಸ್ಕರ್ ರೈ, ಸಮಿತಿ ಸದಸ್ಯರಾದ ವಿಶ್ವನಾಥ್ ರೈ ಕುಕ್ಕುಂಜೋಡು,ಸದಾಶಿವ ರೈ ಗುತ್ತು , ರುಕ್ಮ ನಾಯ್ಕ್ ಮತ್ತು ಜನಾರ್ಧನ ರೈ ದಂಪತಿಗಳು, ಶಶಿಧರ್ ರೈ , ಜಯಂತಿ ಮೋಹನ್ ರೈ ಮಿತ್ರಂಪಾಡಿ,ಹಾಗೂ ಕುಟುಂಬಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here