ಕಡಬ: ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಕೇಸರಿ ಧ್ವಜ ಹಾಕಿದ್ದು ರಾಜಕೀಯ ಕಿಡಿಕೇಡಿಗಳ ಕೃತ್ಯ

0

  • ಹಿಂದೂ ಮುಖಂಡರ ವಿರುದ್ದವೇ  SDPIನ ವಿಕ್ಟರ್ ಮಾರ್ಟೀಸ್ ಗುರುತರ ಆರೋಪ

ಕಡಬ: ಶಾಂತವಾಗಿದ್ದ ಕಡಬದಲ್ಲಿ ಕೋಮುಗಲಭೆ ಆಗಬೇಕೆಂಬ ಉದ್ದೇಶದಿಂದ ರಾಜಕೀಯ ಕಿಡಿಕೇಡಿಗಳು ಈ ಕೃತ್ಯವನ್ನು ಮಾಡಿರುವುದಾಗಿ ಎಸ್.ಡಿ.ಪಿಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟೀಸ್ ಆರೋಪಿಸಿದ್ದಾರೆ. ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಎನ್ಕಜೆಯಲ್ಲಿನ ಇಮ್ಯಾನ್ಯುವೆಲ್ ಎ.ಜಿ. ಚರ್ಚ್ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ್ದಾರೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಮೇ.5 ರಂದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಯಾರು ಇಲ್ಲದ ವೇಳೆ ಮುಖಂಡರು ಬಂದು ಜನ ಸೇರಿ ಬಾವಿಗೆ ಹಾಕಿದ ಪಂಪ್ ಸೆಟ್ ತೆಗೆದಲ್ಲದೆ, ವಿದ್ಯುತ್ ಮೀಟರ್‌ಗೆ ಹಾನಿ ಮಾಡಿರುವುದು ತಿಳಿದು ಬಂದಿದೆ. ಇದು ಹಿಂದೂ ಮುಖಂಡರದ್ದೇ ಕೃತ್ಯ ಎಂದು ಗುರುತರ ಆರೋಪ ಮಾಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಘಟನೆ ನಡೆಯುತ್ತಿದ್ದು ಇದಕ್ಕೆ ಜಿಲ್ಲಾಡಳಿತವೇ ಹೊಣೆ. ಎಲ್ಲವನ್ನೂ ಅನಧಿಕೃತವೆಂದು ಯಾವ ಆಧಾರದಲ್ಲಿ ಹೇಳುತ್ತಿರುವುದು ಎಂದು ಪ್ರಶ್ನಿಸಿದಲ್ಲದೆ ಕೋಮುದ್ವೇಷ ಹರಡುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಕಡಬ ಬ್ಲಾಕ್ SDPIಅಧ್ಯಕ್ಷ ಬಶೀರ್ ಆತೂರು, ಕಾರ್ಯದರ್ಶಿ ನಬಿಶಾನ್ ಕಡಬ, ಸ್ಥಳೀಯ ಮುಖಂಡರಾದ ನೌಶಾದ್ ಕಡಬ, ನವಾಝ್, ಹಾರಿಸ್ ಕಳಾರ, ಆರಿಫ್ ಕೂಯಿಲ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here