ಕನ್ಯಾನ: ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಮನೆಗೆ ಒಡಿಯೂರು ಶ್ರೀ ಭೇಟಿ

0

  • ಸನಾತನ ಹಿಂದೂ ಧರ್ಮ ಎಚ್ಚರವಾಗಬೇಕು – ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕು

ವಿಟ್ಲ:  ಬಡಕುಟುಂಬವನ್ನು ದುರುಪಯೋಗ ಮಾಡಬಾರದು.ತಾಳ್ಮೆ ಸಹನೆ ದೌರ್ಬಲ್ಯವಲ್ಲ ಅದೊಂದು ಶಕ್ತಿ. ಸನಾತನ ಹಿಂದೂ ಧರ್ಮ ಎಚ್ಚರವಾಗಬೇಕು, ಜಾಗೃತರಾಗಬೇಕು. ಯಾವುದೇ ವರ್ಗಕ್ಕೆ ಈ ರೀತಿಯ ಪರಿಸ್ಥಿತಿ ಆಗಬಾರದು. ಇದೊಂದು ಪೈಶಾಚಿಕ ದುಷ್ಕೃತ್ಯವಾಗಿದೆ. ಇದನ್ನು ನಾವು ಖಂಡಿಸಬೇಕಾಗಿದೆ. ಇದರಲ್ಲಿ ಹಿಂದೆ ಮುಂದೆ ನೋಡುವ ವಿಚಾರವಿಲ್ಲ. ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಇದೇ ಆರಂಭ ಇದೇ ಕೊನೆಯಾಗಬೇಕು. ನಾವೆಲ್ಲರೂ ಸಂಘಟಿತರಾಗಿ ಎಚ್ಚರದಿಂದಿರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

 

 ಕನ್ಯಾನ ಗ್ರಾಮದ ಕಣಿಯೂರಿನ ಬಾಡಿಗೆ ಮನೆಯೊಂದರಲ್ಲಿ   ಆತ್ಮಹತ್ಯೆ  ಮಾಡಿಕೊಂಡ   ವಿದ್ಯಾರ್ಥಿನಿಯ ಮನೆಗೆ ಮೇ.6ರಂದು ಬೇಟಿ ನೀಡಿದ ಅವರು ಮೃತ ವಿದ್ಯಾರ್ಥಿನಿಯ ಫೋಷಕರಿಂದ  ಮಾಹಿತಿ ಪಡೆದುಕೊಂಡು ಅವರಿಗೆ ಧೈರ್ಯ ತುಂಬಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.


ಈ ಒಂದು ಸಾವು ಬೇರೆಯೇ ರೀತಿಯಲ್ಲಿ ನಡೆದಿರುವುದಾಗಿ ಕಂಡುಬರುತ್ತಿದೆ. ವಶೀಕರಣ ಬಳಕೆ ಮಾಡಿರುವ ಹಾಗು ಹೆದರಿಸಿ ಮಾಡಿರುವ ಘಟನೆಯೆಂದು ನಮಗೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.   ಒಂದು  ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಾಕ್ಷಿ ಕಂಡು ಬರುತ್ತಿಲ್ಲ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು. ಸನಾತನ ಹಿಂದೂ ಧರ್ಮ ಇಂತಹ ವಿಚಾರ ಬಂದಾಗ ಒಗ್ಗಟ್ಟಾಗಬೇಕು ಜಾಗೃತಿಯಾಗಬೇಕು. ಇಂತಹ ದುಷ್ಕೃತ್ಯ ಸಮಾಜದಲ್ಲಿ ನಡೆಯಬಾರದು ಎಂದರು.

ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ರಘುರಾಮ ಶೆಟ್ಟಿ ಕನ್ಯಾನ, ಒಡಿಯೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪಣೆಯಡ್ಕ, ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಅಧ್ಯಕ್ಷ ಲೊಕೇಶ್ ಗೌಡ ಕನ್ಯಾನ, ಭಜರಂಗದಳ ಸಂಚಾಲಕ ಕೃಷ್ಣಪ್ಪ ಗೌಡ ಪಣೆಯಡ್ಕ, ಭಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ, ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಹೆಚ್, ದಿನೇಶ್  ಪಟ್ಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here