ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಯಶಸ್ವಿ ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಿಂದ ರುವಾರಿಗಳಿಗೆ ಸನ್ಮಾನ

0

ಪುತ್ತೂರು:ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದ್ದು ಮಾತ್ರವಲ್ಲದೆ ದೇವಳದ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದು ಒಟ್ಟು 12.5 ಲಕ್ಷ ಉಳಿಕೆಯಾಗಿದ್ದು ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದುದಕ್ಕಾಗಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾದ ಉದ್ಯಮಿ ಅಬುದಾಬಿ ಜಯರಾಮ ರೈ ಮಿತ್ರಂಪಾಡಿಯವರಿಗೆ ಜೀರ್ಣೋದ್ಧಾರ  ಸಮಿತಿ ಅಧ್ಯಕ್ಷರಾದ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿಯವರ ನಿವಾಸದಲ್ಲಿ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯೆಯಾಗಿರುವ ಪದ್ಮಾವತಿ ಶೀನಪ್ಪ ರೈ ದಂಪತಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಆಲಡ್ಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಅತ್ಯಂತ ಅಚ್ಚುಕಟ್ಟಾಗಿ ನಡೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಉತ್ತಮ ನೇತೃತ್ವದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಡಮಜಲು ಸುಭಾಸ್ ರೈಯವರು ಆಲಡ್ಕಶ್ರೀ ಸದಾಶಿವ ದೇವಸ್ಥಾನ ದ ಯಶಸ್ವೀ ಬ್ರಹ್ಮಕಲಶೋತ್ಸವ ವನ್ನು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ದಾನಿಮಿತ್ರಂಪಾಡಿ ಜಯರಾಮ ರೈಗಳು ವಿದೇಶದಲ್ಲಿದ್ದರೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಳದ ಎಲ್ಲಾ ಕಾರ್ಯಚಟುವಟಿಕೆಯಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ್ ಶೆಟ್ಟಿ ಯವರು ಮಾತನಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಉತ್ತಮ ಜವಾಬ್ದಾರಿಯನ್ನು ರಾಜಕೀಯ ರಹಿತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿ ಮುನ್ನಡೆಸಿದ್ದು ಮನಸ್ಸಿಗೆ ತೃಪ್ತಿ ತಂದಿದೆ ಹಾಗೂ ಸುಮಾರು 12.5ಲಕ್ಷ ರೂಪಾಯಿ ಉಳಿಕೆಯೊಂದಿಗೆ ಯಶಸ್ವಿಯಾಗಿ ಎಲ್ಲರ ಪ್ರೀತಿಗೆ ಪಾತ್ರನಾದದ್ದು ಸಂತೋಷದ ವಿಷಯವಾಗಿದ್ದು ಸಹಕರಿಸಿದ ವಿವಿಧ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ , ಭಕ್ತವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಅಬುದಾಬಿ ಜಯರಾಮ ರೈ ಮಿತ್ರಂಪಾಡಿ ಮಾತನಾಡಿ ನಾನು ವಿದೇಶದಲ್ಲಿ ಉದ್ಯಮಿಯಾಗಿದ್ದರೂ ನನ್ನ ಊರಿನ  ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸಿಕೊಂಡು ಯಾವುದೇ ಸಾಮಾಜಿಕ ಕೆಲಸ ಕಾರ್ಯಗಳಿಗೆ ನನ್ನಿಂದಾಗುವ ಎಲ್ಲಾ ಸಹಾಯವನ್ನು ನೀಡುತ್ತೇನೆ, ನನ್ನ ಬಂಧುಗಳಿಗೆ ಮತ್ತು ಹುಟ್ಟೂರಿಗೆ ನೀಡಿದ ಸೇವೆ ತೃಪ್ತಿಯನ್ನು ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಆಲಡ್ಕ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೋಲೋಡಿಗುತ್ತು ಅರುಣ್ ಕುಮಾರ್ ಆಳ್ವ, ಕುಟುಂಬದ ಯಜಮಾನ ದೇರ್ಲ ಕೊರಗಪ್ಪ ರೈ, ತಿಂಗಳಾಡಿ ರಾಮಯ್ಯ ರೈ, ಎಂ ಆರ್ ಜಯ ಕುಮಾರ್ ರೈ ಮಿತ್ರಂಪಾಡಿ, ಹರ್ಷ ಕುಮಾರ್ ರೈ ಮಾಡಾವು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗುತ್ತು ಭಾಸ್ಕರ್ ರೈ, ಸಮಿತಿ ಸದಸ್ಯರಾದ ವಿಶ್ವನಾಥ್ ರೈ ಕುಕ್ಕುಂಜೋಡು,ಸದಾಶಿವ ರೈ ಗುತ್ತು , ರುಕ್ಮ ನಾಯ್ಕ್ ಮತ್ತು ಜನಾರ್ಧನ ರೈ ದಂಪತಿಗಳು, ಶಶಿಧರ್ ರೈ , ಜಯಂತಿ ಮೋಹನ್ ರೈ ಮಿತ್ರಂಪಾಡಿ,ಹಾಗೂ ನೂರಾರು ಭಂದು ಮಿತ್ರರು ಕುಟುಂಬಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here