ಇಚ್ಲಂಪಾಡಿ: ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ

0

 

ನೆಲ್ಯಾಡಿ: ಸಂತ ಜಾರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬದ ಅಂಗವಾಗಿ ಮೇ. 6ರಂದು ಸಂಜೆ ವಿವಿಧ ಕಾರ್ಯಕ್ರಮಗಳು ನಡೆಯಿತು.

 


ಮೇ ೬ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಕಾಸರಗೋಡು ಸೈಂಟ್ ಮೇರಿಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಗೀವರ್ಗೀಸ್ ಮಾಥ್ಯುರವರ ನೇತೃತ್ವದಲ್ಲಿ ಪವಿತ್ರ ದಿವ್ಯ ಬಲಿಪೂಜೆ, ಸಂತ ಜಾರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ನಡೆಯಿತು. ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ಸಂಧ್ಯಾ ಪ್ರಾರ್ಥನೆ, ಹಬ್ಬದ ಸಂದೇಶ ನಡೆಯಿತು. ಬಳಿಕ ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ ನಡೆಯಿತು. ರೆಂಜಿಲಾಡಿ ಸೈಂಟ್ ತೋಮಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಕುರಿಯಾಕೋಸ್ ತೋಮಸ್ ಪಳ್ಳಿಚ್ಚಿರ, ಎನ್.ಆರ್.ಪುರ ಕರುಗುಂದ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ತೋಮಸ್ ಮಾಥ್ಯು, ಮರ್ದಾಳ ಸೈಂಟ್ ಮೇರಿಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ. ಜೋನ್ ಮಾಥ್ಯು, ಬ್ರಹ್ಮಾವರ ಕುರಾಡಿ ಸೈಂಟ್ ಪೀಟರ್‍ಸ್ ಮತ್ತು ಸೈಂಟ್ ಪೌಲ್ಸ್ ಓರ್ಥಡೋಕ್ಸ್ ಚರ್ಚ್‌ನ ರೆ.ಫಾ. ಲಾರೆನ್ಸ್ ಡಿ.ಸೋಜ ಸೇರಿದಂತೆ ಅನೇಕ ಧರ್ಮಗುರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ದಿವ್ಯ ಬಲಿಪೂಜೆಯ ಬಳಿಕ ಉರುಳು ಸೇವೆ ಸೇರಿದಂತೆ ವಿವಿಧ ರೀತಿಯ ಹರಕೆಗಳನ್ನು ಭಕ್ತರು ಸಲ್ಲಿಸಿದರು. ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್, ಟ್ರಸ್ಟಿ ಜೋನ್ ಅಬ್ರಹಾಂ ಚೀರಮಟ್ಟಂ, ಕಾರ್ಯದರ್ಶಿ ಚಾಕೋ ವಿ.ಯನ್., ಆಡಳಿತ ಮಂಡಳಿ ಸದಸ್ಯರಾದ ಟಿ.ಜೆ.ಕುರಿಯಾಕೋಸ್, ಮೋಳಿ ತೋಮಸ್, ರೋಯಿ ಟಿ.ಕೆ., ಉಣ್ಣಿಟ್ಟ ಯಂ.ಕೆ., ಮನೋಜ್ ಟಿ.ಬಿ., ಜಿ.ಜೋಸೆಫ್, ಜೋಜು ಜೋಸೆಫ್, ಸುನಿಲ್ ಟಿ.ಬಿ., ಸುನೀಶ್ ಟಿ.ಪಿ., ಲೆಕ್ಕ ಪರಿಶೋಧಕರಾದ ಪಿ.ಸಿ.ಪೌಲೋಸ್, ಪಿ.ಕೆ.ತೋಮಸ್‌ರವರು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.

 

ಚರ್ಚ್‌ನಲ್ಲಿ ಇಂದು:
ಮೇ. 7ರಂದು ಬೆಳಿಗ್ಗೆ 7.30ಕ್ಕೆ ಪ್ರಭಾತ ಪ್ರಾರ್ಥನೆ, ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಪರಮಾಧ್ಯಕ್ಷರ ಪ್ರಿನ್ಸಿಪ್ ಸೆಕ್ರೆಟರಿ ರೆ.ಫಾ.ಡಾ| ಜೋನ್ಸ್ ಅಬ್ರಹಾಂ ಕೋಣಾಟ್‌ರವರ ನೇತೃತ್ವದಲ್ಲಿ ಪವಿತ್ರ ದಿವ್ಯಬಲಿ ಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಹಬ್ಬದ ಸಂದೇಶ, ಜೋರ್ಜಿಯನ್ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಏಲಂ, ಹೊಸಂಗಡಿ ಶಿಲುಬೆ ಗೋಪುರದ ತನಕ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಹಬ್ಬದ ಧ್ವಜ ಇಳಿಸುವಿಕೆ, ಹಬ್ಬದ ಸಮಾರೋಪ ಪ್ರಾರ್ಥನೆ ನಡೆಯಲಿದೆ. ಮೇ ೭ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿಗೆ ಬಸ್ಸಿನ ಸರ್ವೀಸ್ ಸಹ ಇದೆ.

ಸುದ್ದಿ ನ್ಯೂಸ್ ಚಾನೆಲ್‌ನಲ್ಲಿ ನೇರ ಪ್ರಸಾರ:
ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ಧಿ ಹೊಂದಿರುವ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಮೇ.6ರಂದು ನಡೆದ ವಾರ್ಷಿಕ ಹಬ್ಬದ ನೇರ ಪ್ರಸಾರ ಸುದ್ದಿ ನ್ಯೂಸ್ ಯು ಟ್ಯೂಬ್ ಚಾನೆಲ್ ಹಾಗೂ ಸುದ್ದಿ ಫೇಸ್ ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದರು. ಮೇ.7ರಂದು ನಡೆಯುವ ವಾರ್ಷಿಕ ಹಬ್ಬದ ಕೊನೆ ದಿನದ ಕಾರ್ಯಕ್ರಮವೂ ಸುದ್ದಿ ನ್ಯೂಸ್ ಯು ಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಪೇಜ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ.

 

LEAVE A REPLY

Please enter your comment!
Please enter your name here