ಪುತ್ತೂರು ಆಫೀಸರ್ ಕ್ಲಬ್‌ನಲ್ಲಿ SPYSS ನಿಂದ ಉಚಿತ ಯೋಗ ತರಗತಿ

0

ಪುತ್ತೂರು : SPYSS ವತಿಯಿಂದ ಹೊಸ ಉಚಿತ ಯೋಗ ತರಗತಿ ಪುತ್ತೂರು ಆಫೀಸರ್ ಕ್ಲಬ್‌ನಲ್ಲಿ ನಡೆಯಿತು. ನಗರಸಭಾ ಆಯುಕ್ತ ಮಧು ಎಸ್ ಮನೋಹರ್ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. SPYSSಜಿಲ್ಲಾ ಪ್ರಮುಖ್ ಗಣೇಶ್‌ರವರು ಪ್ರಾಸ್ತಾವಿಕ ಮಾತನಾಡಿ ಸಮಿತಿಯ ಪರಿಚಯ ಮತ್ತು ಸಮಾಜಕ್ಕೆ ಆರೋಗ್ಯಭಾಗ್ಯ ನೀಡುವ ನಿಟ್ಟಿನಲ್ಲಿ ಸಮಿತಿಯ ಧ್ಯೇಯ ಉದ್ದೇಶಗಳ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ ಹರಿಪ್ರಸಾದ್‌ರವರು ಮಾತನಾಡಿ ಯೋಗಜೀವನದ ಲಾಭಗಳ ಬಗ್ಗೆ ವಿವರಿಸಿ ಸಮಿತಿಯ ಅತ್ಯಮೂಲ್ಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದು ತಿಳಿಸಿದರು. ಜಿಲ್ಲಾ ಶಿಕ್ಷಣ ಪ್ರಮುಖ ಜಗನ್ನಾಥ್‌ರವರು ಯೋಗ ಜೀವನದ ಅನುಭವಗಳನ್ನು ಹಂಚಿಕೊಂಡರು. ಯೋಗ ಬಂಧು ಸುಂದರ, ಸುರೇಂದ್ರ, ಈರಣ್ಣ, ಸುಲತ, ಆಶಾಲತಾರವರು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಸ್ವಾಗತಿಸಿದರು. ಚಿತ್ರ ವಂದಿಸಿದರು.

LEAVE A REPLY

Please enter your comment!
Please enter your name here