ಮೇ.10: ಸಾಲ್ಮರ ದಾರುಲ್ ಹಸನೀಯ ಸಂಸ್ಥೆ ವತಿಯಿಂದ ನೂರೇ ಹಜ್‌ಮೀರ್ ಆಧ್ಯಾತ್ಮಿಕ ಸಂಗಮ-ವಲಿಯುದ್ದೀನ್ ಫೈಝಿ ಆಗಮನ

0

ಪುತ್ತೂರು: ಸಾಲ್ಮರ ಸಾದತ್ ಮಹಲ್‌ನಲ್ಲಿರುವ ದಾರುಲ್ ಹಸನೀಯ ವಿದ್ಯಾಸಂಸ್ಥೆಯ ಅಧೀನದ ಮರಿಯಂ ಹಿಪ್ಲುಲ್ ಖುರ್‌ಆನ್ ಕಾಲೇಜು ಇದರ ವತಿಯಿಂದ ಮೇ.೧೦ರಂದು ಸಾಲ್ಮರ ಮೌಂಟನ್‌ವ್ಯೂ ಶಾಲಾ ಮೈದಾನದಲ್ಲಿ ಖ್ಯಾತ ವಿದ್ವಾಂಸ ವಲಿಯುದ್ದೀನ್ ಫೈಝಿ ವಾಯಖ್ಖಾಡ್ ರವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಮತ್ತು ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವು ಜರಗಲಿದೆ ಎಂದು ಸಂಸ್ಥೆಯ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಹಾಜಿ ಬಾಳಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಮೇ. ೧೦ ಸಂಜೆ ಗಂಟೆ ೬ಕ್ಕೆ ಸಯ್ಯದ್ ಯಾಹ್ಯಾ ಹಾದಿ ತಂಙಳ್ ಸಾಲ್ಮರರವರ ನೇತೃತ್ವದಲ್ಲಿ ಮರ್‌ಹೂಂ ಸಯ್ಯದ್ ಹಸನ್‌ಕೋಯ ತಂಙಳ್‌ರವರ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಜೆ ಗಂಟೆ ೭ರಿಂದ ಧಾರ್ಮಿಕ ಪ್ರಭಾಷಣ ಹಾಗೂ ಲಕ್ಷಾಂತರ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿದ ಸಾಂತ್ವಾನದ ಬರವಸೆಯ ಬೆಳಕಾದ ವಿದ್ವಾಂಸ ಸೂಫಿವರ್ಯ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ಪ್ರಸಿದ್ದ ಆಧ್ಯಾತ್ಮಿಕ ಸಂಗಮವಾದ ನೂರೇ ಅಜ್ಮೀರ್ ಹಾಗೂ ಧಾರ್ಮಿಕ ಪ್ರವಚನ ದುವಾಃ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಸಯ್ಯದ್ ಶರಪುದ್ದೀನ್ ತಂಙಳ್‌ರವರು ಸಮಾರಂಭದ ಅಧ್ಯಕತೆ ವಹಿಸಲಿದ್ದಾರೆ. ಕೆ.ಆರ್ ಹುಸೈನ್ ಧಾರಿಮಿ ರೆಂಜಲಾಡಿಯವರು ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಸಯ್ಯದ್ ಎಸ್.ಎಂ ತಂಙಳ್ ಸಾಲ್ಮರ, ಸಯ್ಯದ್ ಹಬೀಬ್ ರಹ್ಮಾನ್ ತಂಙಳ್ ಮುಕ್ವೆ, ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಆತೂರು, ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು, ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಉಸ್ತಾದ್ ಬಂಬ್ರಾಣ, ಓಲೆಮುಂಡಾವು ಮಹಮ್ಮೂದುಲ್ ಫೈಝಿ, ಉಸ್ಮಾನುಲ್ ಫೈಝಿ ಉಳ್ಳಾಲ, ಕೆ.ಪಿ ಅಹಮ್ಮದ್ ಹಾಜಿ ಆಕರ್ಷಣ್ ಹಾಗೂ ಇನ್ನಿತರ ಹಲವಾರು ಉಲೇಮಾ, ಉಮಾರ, ನಾಯಕರು, ಸಾದಾತ್‌ಗಳು, ಸಮಾಜಿಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮೂರು ವರ್ಷಗಳು ಪೂರೈಸಿರುವ ಸಾಲ್ಮರ ದಾರುಲ್ ಹಸನೀಯಾ ವಿದ್ಯಾಸಂಸ್ಥೆಯಲ್ಲಿ ಒಟ್ಟು ೩೫ ವಿದ್ಯಾರ್ಥಿಗಳು ಪವಿತ್ರ ಖುರ್‌ಆನ್ ಕಂಠಪಾಠದ ಜೊತೆಗೆ ಧಾರ್ಮಿಕ ದಅವಾ ಕೋರ್ಸ್ ಮತ್ತು ಲೌಕಿಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ದಾರುಲ್ ಹಸನಿಯಾ ಮರಿಯಂ ಹಿಫ್ಲುಲ್ ಖುರ್‌ಆನ್ ಕಾಲೇಜಿನ ಅಧ್ಯಕ್ಷ ಸಯ್ಯಿದ್ ಶರಪುದ್ದೀನ್ ತಂಙಳ್ ಸಾಲ್ಮರ, ದಾರುಲ್ ಹಸನೀಯಾ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸೈನಾರ್ ಹಾಜಿ ಸಿಟಿ ಬಜಾರ್, ವ್ಯವಸ್ಥಾಪಕರಾದ ಅನ್ವರ್ ಸಾದತ್ ಮುಸ್ಲಿಯಾರ್ ಪುತ್ತೂರುರವರು ಉಪಸ್ಥಿತರಿದ್ದರು. ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನಿಫಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here