ಮೇ.8:ಸಾರಕೂಟೇಲು ಭಂಡಾರತ್ತಡ್ಕ ಶ್ರೀನಾಗದೇವರು, ರಕ್ತೇಶ್ವರಿ ಗುಳಿಗ ಸನ್ನಿಧಿಯಲ್ಲಿ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ

0

ಬಡಗನ್ನೂರುಃ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಭಂಡಾರತ್ತಡ್ಕ-ಸಾರಕೂಟೇಲು, ಶ್ರೀನಾಗದೇವರು, ರಕ್ತೇಶ್ವರಿ ಮತ್ತು ಗುಳಿಗ ಸನ್ನಿಧಿಯಲ್ಲಿ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ಮತ್ತು ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮೇ.7ರಂದು ಆರಂಭಗೊಂಡಿದ್ದು 8ರವರೆಗೆ ನಡೆಯಲಿದೆ.


ಮೇ.7ರಂದು ಬೆಳಿಗ್ಗೆ 10 ರಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಗಣೇಶ ಕುಮಾರ್ ಪಾದೆಕರ್ಯ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಪ್ರಸಾದ್ ಕಜೆ, ಶ್ಯಾಮ್ ಸುಂದರ್ ಭಟ್ ಬಟ್ಯಡ್ಕ, ಹಾಗೂ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.

ಇಂದು ಬ್ರಹ್ಮಕಲಶಾಭಿಷೇಕ : ಮೇ.8ರಂದು ಬೆಳಗ್ಗೆ 6ರಿಂದ ಗಣಪತಿ ಹೋಮ, ಪ್ರಧಾನ ಹೋಮಗಳು, ಕಲಶ ಪೂಜೆ ಬೆಳಗ್ಗೆ ೮-೩೮ಕ್ಕೆ ಸಾನಿಧ್ಯಗಳಿಗೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಆರಂಭ, ಮಂಗಳಾರತಿ, ೧೨ರಿಂದ ಶ್ರೀನಾಗಬ್ರಹ್ಮ, ರಕ್ತೇಶ್ವರಿ, ಗುಳಿಗ ಸನ್ನಿಧಾನಗಳಲ್ಲಿ ಮಹಾಮಂಗಳಾರತಿ, ನಡಾವಳಿ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಪಣೆ ನಡೆಯಲಿದೆ. ಸಂಜೆ ೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮.೩೦ರಿಂದ ಅನ್ನಸಂತರ್ಪಣೆ, ರಾತ್ರಿ ೯.೩೦ರಿಂದ ಮಹತೋಭಾರ ಶ್ರೀಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ನಾಗರ ಪಂಚಮಿ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here