ಪಂಜೊಟ್ಟು ತರವಾಡು ಮನೆ ಧರ್ಮ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು: ಇರ್ದೆ ಗ್ರಾಮದ ಪಂಜೊಟ್ಟು ತರವಾಡು ಮನೆ ಕುಟುಂಬ ದೈವ ದೇವರುಗಳ ವಿನಿಯೋಗ ಮತ್ತು ಶ್ರೇಯೋಭಿವೃದ್ಧಿ ಟ್ರಸ್ಟ್‌ನ ತರವಾಡು ಮನೆಯಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಮೇ.6ರಂದು ನಡೆಯಿತು.

ತರವಾಡು ಮನೆಯ ವತಿಯಿಂದ ಬೆಳಿಗ್ಗೆ ಅರ್ಚಕ ಅನಂತರಾಮ ಮಡಕ್ಕುಲ್ಲಾಯರವರ ಪೌರೋಹಿತ್ಯದಲ್ಲಿ ಗಣಪತಿ ಹವನ, ರಕ್ತೇಶ್ವರಿ ತಂಬಿಲ, ನಾಗತಂಬಿಲ, ಹರಿಸೇವೆ, ವೆಂಕಟ್ರಮಣ ದೇವರ ಮುಡಿಪು ಸೇವೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಅಜಲಡ್ಕ ನಳಿನಿ ಎಂ. ಪೂಂಜಾ ಮತ್ತು ಸಹೋದರರು ಹಾಗೂ ಸಹೋದರಿಯರ ವತಿಯಿಂದ ನಡೆದ ದೈವಗಳ ನೇಮೋತ್ಸವದಲ್ಲಿ ಅಪರಾಹ್ನ ದೈವಗಳ ಭಂಡಾರ ತೆಗೆದು, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಜೋಡುಕಲ್ಲುರ್ಟಿ ದೈವಗಳ ನೇಮ, ಜುಮಾದಿ ಬಂಟ(ಪುದಕೋಲ), ಕಾರ್ನವರಿಗೆ ಅಗೇಲು ಸೇವೆ, ಸಂಜೆ ಪಂಜುರ್ಲಿ ಕೋಲ ರಾತ್ರಿ ಅನ್ನಸಂತರ್ಪಣೆಯ ಬಳಿಕ ಕುಪ್ಪೆ ಪಂಜುರ್ಲಿ, ಜೋಡು ಕಲ್ಲುರ್ಟಿ ನೇಮೋತ್ಸವ ರಾತ್ರಿ ಧರ್ಮದೈವ ಧೂಮಾವತಿ ದೈವದ ನೇಮ ಹಾಗೂ ಕೊರತ್ತಿ ಮತ್ತು ಗುಳಿಗ ದೈವದ ನೇಮ ನಡೆಯಿತು. ತರವಾಡು ಮನೆಯ ಯಜಮಾನ ಪಂಜೊಟ್ಟು ವಿಶ್ವನಾಥ ರೈ ಮಾದೋಡಿ, ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ರೈ, ಸಂಚಾಲಕ ನುಳಿಯಾಲು ಜಗನ್ನಾಥ ರೈ, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಖಜಾಂಚಿ ರಮೇಶ್ ರೈ ಪಂಜೊಟ್ಟು, ಸೇವಾಕರ್ತರಾದ ಅಜಲಡ್ಕ ನಳಿನಿ ಎಂ. ಪೂಂಜಾ ಮತ್ತು ಸಹೋದರರು ಹಾಗೂ ಸಹೋದರಿಯರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ಮಂದಿ  ನೇಮೋತ್ಸವದಲ್ಲಿ ಭಾಗಿಗಳಾಗಿದ್ದರು.

LEAVE A REPLY

Please enter your comment!
Please enter your name here