ಮೇ.10 ಸಂಪ್ಯ ಉದಯಗಿರಿಯಲ್ಲಿ ನಾಗಮಂಡಲೋತ್ಸವ

0

 

ಪುತ್ತೂರು: ವರದಾಯಿನಿ ಶ್ರೀ ವ್ಯಾಘ್ರಚಾಮುಂಡಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಮರಕ್ಕ, ಸಂಪ್ಯ ಇದರ ವತಿಯಿಂದ ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯ ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ಸಗ್ರಿ ಗೋಪಾಲಕೃಷ್ಣ ಸಾಮಗರರಿಂದ ಹಾಗೂ ಮುದ್ದೂರು ಶ್ರೀಕೃಷ್ಣಪ್ರಸಾದ್ ವೈದ್ಯ ಬಳಗದವರಿಂದ ಚತುರ್ಪವಿತ್ರ ನಾಗಮಂಡಲೋತ್ಸವ ಮೇ.10 ರಂದು ರಾತ್ರಿ.ಗಂಟೆ 8.30ರಿಂದ ಸಂಪ್ಯ ಉದಯಗಿರಿ ಶ್ರೀವಿಷ್ಣುಮೂರ್ತಿ, ಶ್ರೀಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯಲಿದೆ.

ಮೇ.9ರಂದು ಬೆಳಿಗ್ಗೆ ಮರಕ್ಕ ಶ್ರೀ ವಾಸುಕಿ ನಾಗಬ್ರಹ್ಮ ಸಾನಿಧ್ಯದಲ್ಲಿ ಸರ್ಪಸಂಸ್ಕಾರ ಮಂಗಲ, ಆಶ್ಲೇಷ ಬಲಿ, ಪವಮಾನ ಅಭಿಷೇಕ, ನಾಗತಂಬಿಲ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫.೩೦ರಿಂದ ಸಂಪ್ಯ ಉದಯಗಿರಿ ನಾಗಮಂಟಪದಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಂಟಪ ಶುದ್ಧಿ, ವಾಸ್ತು ರಕ್ಷೆಘ್ನ ಹೋಮ, ವಾಸ್ತು ಕಲಶ ಪೂಜೆ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶೀರೂರು ಪಾರ್ಕ್ ಶ್ರೀ ಅಯ್ಯಪ್ಪ ದೇವಸ್ಥಾನದ ಧರ್ಮದರ್ಶಿ ಆನಂದ ನಾಯಕ್ ಗುರುಸ್ವಾಮಿ ದೀಪ ಪ್ರಜ್ವಲಿಸಲಿದ್ದಾರೆ. ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮಿಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ರಾಮಕೃಷ್ಣ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪೂಡಾದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶ್ರೀಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ಜಯಂತ ನಡುಬೈಲು, ಸಾಮಾಜಿಕ ಮುಖಂಡ ಸಂತೋಷ್ ಕುಮಾರ್ ರೈ ಕೈಕಾರ, ಮಂಗಳೂರಿನ ಉದ್ಯಮಿ ರಮಾನಂದ ರಾವ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿಠಲ್ ನಾಯಕ್ ಕಲ್ಲಡ್ಕ ಹಾಗೂ ಬಳಗದವರಿಂದ `ಗೀತಾ-ಸಾಹಿತ್ಯ-ಸಂಭ್ರಮ’ ನಡೆಯಲಿದೆ.

ಮೇ.೧೦ರಂದು ಬೆಳಿಗ್ಗೆ 7ರಿಂದ ಶ್ರೀ ವಾಸುಕಿ ನಾಗಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ಸೇವೆ, ಶ್ರೀವ್ಯಾಘ್ರಚಾಮುಂಡಿ, ಶ್ರೀರಕ್ತೇಶ್ವರಿ, ರಾಜಗುಳಿಗ ದೈವಗಳಿಗೆ ತಂಬಿಲ ಸೇವೆ, ಬೆಳಿಗ್ಗೆ ಗಂಟೆ ೧೦ರಿಂದ ನಾಗಮಂಟಪದಲ್ಲಿ ಗಣಪತಿ ಹವನ, ಮಧ್ಯಾಹ್ನ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ 5.30ರಿಂದ ಮರಕ್ಕ ಶ್ರೀ ವಾಸುಕಿ ನಾಗಬ್ರಹ್ಮ ಸಾನಿಧ್ಯದಲ್ಲಿ ಹಾಲಿಟ್ಟು ಸಾಮೂಹಿಕ ಪ್ರಾರ್ಥನೆಯೊಂದಿಗೆ ಮರಕ್ಕ ಸಾನಿಧ್ಯದಿಂದ ಐದು ಹೆಡೆಯ ಚಿನ್ನದ ನಾಗ ಪ್ರತಿಮೆಯಲ್ಲಿ ಸಾನಿಧ್ಯವನ್ನು ನಾಗಪಾತ್ರಿಯವರು ನಾಗಮಂಡಲ ಸೇವೆ ನಡೆಯುವ ಉದಯಗಿರಿ ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ಕರೆತರಲಾಗುವುದು. ರಾತ್ರಿ 8.30ರಿಂದ ನಾಗಮಂಡಲೋತ್ಸವ ನಡೆಯಲಿದೆ ಎಂದು ನಾಗಮಂಡಲೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here