ಶ್ರೀ ದುರ್ಗಾ ಫರ್ನಿಚರ್ಸ್ & ಹೋಂ ಎಪ್ಲಾಯನ್ಸಸ್

0

ಉಪ್ಪಿನಂಗಡಿ: ಊರೊಂದು ಅಭಿವೃದ್ಧಿಯಾಗಲು ಸಮಾಜದಲ್ಲಿರುವ ಉದ್ಯಮಿಗಳ ಸಹಕಾರ, ಸಹಭಾಗಿತ್ವವಿದ್ದಾಗ ಮಾತ್ರ ಸಾಧ್ಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಸಿವಿಲ್ ಎಂಜಿನಿಯರ್ ಸುಧಾಕರ ಶೆಟ್ಟಿ ಕೋಟೆ ಅವರ ಮಾಲಕತ್ವದಲ್ಲಿ ಗಾಂಧಿಪಾರ್ಕ್ ಬಳಿಯ ಕೋಟೆ ರಸ್ತೆಯ ಪಶು ವೈದ್ಯಕೀಯ ಆಸ್ಪತ್ರೆಯ ಬಳಿ ನೂತನವಾಗಿ ಶುಭಾರಂಭಗೊಂಡ ಶ್ರೀ ದುರ್ಗಾ ಫರ್ನಿಚರ್ಸ್ ಮತ್ತು ಹೋಂ ಎಪ್ಲಾಯನ್ಸ್‌ಸ್‌ನ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಹೊಸ ಹೊಸ ಉದ್ಯಮ ಆರಂಭಿಸಿದಾಗ ಹೆಚ್ಚಿನ ಉದ್ಯೋಗವೂ ಸೃಷ್ಟಿಯಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಈ ಕಾರ್ಯಗಳು ಉದ್ಯಮಿಗಳಿಂದ ಇನ್ನಷ್ಟು ನೆರವೇರಲಿ. ಪ್ರಧಾನಿ ನರೇಂದ್ರ ಮೋದಿಯವರ ಕನಸು ಕೂಡಾ ಇದೇ ಆಗಿದೆ ಎಂದರು.

ಸಂಸ್ಥೆ ಮಾಲಕರ ಕುಟುಂಬದ ಹಿರಿಯರಾದ ಶ್ರೀಮತಿ ಸುನಂದ ಶೆಟ್ಟಿ ಮತ್ತು ಸದಾಶಿವ ಶೆಟ್ಟಿ ಉಜಿರೆ ಹಾಗೂ ಶ್ರೀಮತಿ ತಾರಾವತಿ ಶೆಟ್ಟಿ ಮತ್ತು ಗಣಪತಿ ಶೆಟ್ಟಿ ದಂಪತಿ ದೀಪ ಪ್ರಜ್ವಲನೆಗೈದು ಶುಭ ಹಾರೈಸಿದರು. ಉದ್ಯಮಿ, ತಾಲೂಕು ಭಜನಾ ಪರಿಷತ್‌ನ ಅಧ್ಯಕ್ಷರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ಕುಟುಂಬದ ಹಿರಿಯರು ನಡೆಸಿಕೊಂಡು ಬರುತ್ತಿದ್ದ ವ್ಯವಹಾರಗಳಿಗೆ ಈಗಿನ ಕಾಲಕ್ಕೆ ಹೊಂದಾಣಿಕೆಯಾಗುವ ಆಧುನಿಕ ಸ್ಪರ್ಶ ನೀಡಿ ಅವರ ಮಾರ್ಗದರ್ಶನದಂತೆ ಮುಂದುವರಿಸಬೇಕು. ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಅವರ ಶ್ರಮವನ್ನು ವ್ಯರ್ಥವಾಗಲು ಬಿಡಬಾರದು ಎಂದರು.

ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕರುಣಾಕರ ಸುವರ್ಣ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷರಾದ ವಿನಾಯಕ ಪೈ, ಸದಸ್ಯರಾದ ಯು.ಟಿ. ತೌಸಿಫ್, ಸಿಎ ಬ್ಯಾಂಕ್ ಅಧ್ಯಕ್ಷರಾದ ಕೆ.ವಿ. ಪ್ರಸಾದ್, ಉಪಾಧ್ಯಕ್ಷರಾದ ಸುನೀಲ್ ದಡ್ಡು, ೩೪ ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷರಾದ ಪ್ರಶಾಂತ್, ಸದಸ್ಯರಾದ ರಮೇಶ್, ಶ್ರೀ ಲಕ್ಷ್ಮೀ ವೆಂಕರಟರಮಣ ದೇವಾಲಯದ ಮೊಕ್ತೇಸರರಾದ ಅನಂತರಾಯ ಕಿಣಿ, ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ, ಪ್ರಮುಖರಾದ ಕೈಲಾರ್ ರಾಜಗೋಪಾಲ್ ಭಟ್, ಜಯಂತ ಪೊರೋಳಿ, ಚಂದಪ್ಪ ಮೂಲ್ಯ, ಇಕ್ಬಾಲ್, ಅಜೀಝ್ ಬಸ್ತಿಕಾರ್, ಮಹೇಂದ್ರ ವರ್ಮ ಮೇಲೂರು ಪಟ್ಟೆ, ಆದರ್ಶ ಶೆಟ್ಟಿ ಕಜೆಕ್ಕಾರ್, ವಿದ್ಯಾಧರ ಜೈನ್, ಭಾಸ್ಕರ್ ಶೆಟ್ಟಿ, ಸಮಿತ್ ಶೆಟ್ಟಿ, ರಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ದಾಮೋದರ ಶೆಟ್ಟಿ, ಸಂಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಮೇಶ್ ಶೆಟ್ಟಿ ಮಡಂತ್ಯಾರು ಸ್ವಾಗತಿಸಿದರು. ಧರಣೇಂದ್ರ ಶೆಟ್ಟಿ ವಂದಿಸಿದರು. ಸಂಸ್ಥೆಯ ಮಾಲಕರಾದ ಸಿವಿಲ್ ಎಂಜಿನಿಯರ್ ಸುಧಾಕರ ಶೆಟ್ಟಿ, ಶಶಿಕಲಾ ಶೆಟ್ಟಿ, ಆದೇಶ್ ಶೆಟ್ಟಿ, ಅಮೀಶ್ ಶೆಟ್ಟಿ, ಯತೀಶ್ ಶೆಟ್ಟಿ, ಕವಿತಾ ಶೆಟ್ಟಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

 

LEAVE A REPLY

Please enter your comment!
Please enter your name here